ಬೊಮ್ಮಸಂದ್ರ ನಿಲ್ದಾಣಕ್ಕೆ ಯಾಕೆ ತೈವಾನ್ ಕಂಪನಿ ಹೆಸರು!? ಈ ಕಾರಣ ನೀವು ತಿಳಿಯಲೇಬೇಕು!

ಬೆಂಗಳೂರು:- ಬೊಮ್ಮಸಂದ್ರ ನಿಲ್ದಾಣಕ್ಕೆ ತೈವಾನ್ ಕಂಪನಿ ಹೆಸರು ಇಡಲಾಗಿದ್ದು, ಇದಕ್ಕೆ ಯಾಕೆ ತೈವಾನ್ ಕಂಪನಿ ಹೆಸರು ಇಡಬೇಕೆಂದು ನೀವೆಲ್ಲಾ ಪ್ರಶ್ನೆ ಮಾಡಬಹುದು. ಇದಕ್ಕೆ ಅಸಲಿ ಕಾರಣ ಇಲ್ಲಿದೆ.
ಬೆಂಗಳೂರು ಮೆಟ್ರೋದ ಹಳದಿ ಮಾರ್ಗದ ಬೊಮ್ಮಸಂದ್ರ ನಿಲ್ದಾಣದ ನಿರ್ಮಾಣ ಹಾಗೂ ನಾಮಕರಣ ಹಕ್ಕುಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್ 65 ಕೋಟಿ ರೂಪಾಯಿಗೆ ಗಳಿಸಿದೆ. ಇದು ಬಿಎಂಆರ್ಸಿಎಲ್ನ ಇನೋವೇಟಿವ್ ಫೈನಾನ್ಸಿಂಗ್ ಮೆಕ್ಯಾನಿಸಂ ಯೋಜನೆಯ ಭಾಗವಾಗಿದೆ. ಈ ಒಪ್ಪಂದದಿಂದ ಮೆಟ್ರೋ ನಿರ್ಮಾಣಕ್ಕೆ ಹಣಕಾಸಿನ ನೆರವು ದೊರೆಯಲಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದ ಬೊಮ್ಮಸಂದ್ರ ನಿಲ್ದಾಣ ನಿರ್ಮಾಣ ಸಹಭಾಗಿತ್ವ ಹಾಗೂ ನಾಮಕರಣದ ವಿಚಾರವಾಗಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ ಮತ್ತು ತೈವಾನ್‌ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇದರಂತೆ, ಹಳದಿ ಮಾರ್ಗದಲ್ಲಿರುವ ಬೊಮ್ಮಸಂದ್ರ ನಿಲ್ದಾಣದ ನಿರ್ಮಾಣದಲ್ಲಿ ಸಹಭಾಗಿತ್ವ ಹಾಗೂ ನಾಮಕರಣದ ಹಕ್ಕುಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್ಗೆ ನೀಡಲಾಗುತ್ತದೆ. ಹೀಗಾಗಿ ಬೊಮ್ಮಸಂದ್ರ ನಿಲ್ದಾಣದ ಹೆಸರು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣ ಎಂದಾಗಲಿದೆ.
30 ವರ್ಷಗಳ ಅವಧಿಗೆ ನಾಮಕರಣದ ಹಕ್ಕುಗಳನ್ನು ಹೊಂದಲು ಕಂಪನಿಯು ಬಿಎಂಆರ್‌ಸಿಎಲ್‌ಗೆ 65 ಕೋಟಿ ರೂಪಾಯಿಗಳನ್ನು ಪಾವತಿಸಲಿದೆ ಎಂದು ಬಿಎಂಆರ್ಸಿಎಲ್ ಅಧಿಕೃತ ಪ್ರಕಟಣೆ ತಿಳಿಸಿದೆ. ಹಳದಿ ಮಾರ್ಗದ ನಿಲ್ದಾಣಗಳ ನಿರ್ಮಾಣ ಹಾಗೂ ನಾಮಕರಣ ಸಂಬಂಧ ಮಾಡಿಕೊಂಡ ಮೂರನೇ ಒಪ್ಪಂದ ಇದಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






