ಶಾರುಖ್ ಗೆ ಮಂಗಳೂರು ನಂಟು! ಕನ್ನಡ ಮಾತಾಡ್ತಿದ್ರಾ ಕಿಂಗ್ ಖಾನ್!

ಶಾರುಖ್ ಖಾನ್ ಬಾಲಿವುಡ್ ನ ಬಹುಬೇಡಿಕೆಯ ಸ್ಟಾರ್ ನಟ. ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರ ನಟನೆ ಹಾಗೂ ಇವರ ಹ್ಯಾಂಡ್ಸಮ್ ಲುಕ್ ಗೆ ಫಿದಾ ಅಗದವರೇ ಇಲ್ಲ. ಇವರು ಭಾರತದಷ್ಟೇ ಅಲ್ಲ. ವಿದೇಶದಲ್ಲೂ ತನ್ನದೇ ಆದ ಛಾಪು ಮೂಡಿಸಿದ ನಟ.
ದೇಶ ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇವರಿಗೆ ಕರ್ನಾಟಕ ಅದರಲ್ಲೂ ಮಂಗಳೂರು ನಂಟಿನ ಬಗ್ಗೆ ನಿಮಗೆ ಹೇಳಲೇಬೇಕು.
ನಿಜ, ಅವರ ಬಗೆಗಿನ ಅಪರೂಪದ ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತಿದ್ದೇವೆ. ಶಾರುಖ್ ಖಾನ್ ಅವರು ಬೆಳೆದಿದ್ದು ಮಂಗಳೂರಿನಲ್ಲಂತೆ! ಹೌದು, ‘ಚೆನ್ನೈ ಎಕ್ಸ್ಪ್ರೆಸ್’ ರಿಲೀಸ್ ಸಂದರ್ಭದಲ್ಲಿ ಶಾರುಖ್ ಖಾನ್ ಈ ವಿಚಾರ ರಿವೀಲ್ ಮಾಡಿದ್ದರು. ‘ನಾನು ಹುಟ್ಟಿದ್ದು ಮಂಗಳೂರಿನಲ್ಲಿ. ಐದು ವರ್ಷಗಳವರೆಗೆ ಅಲ್ಲಿಯೇ ಇದ್ದೆ. ಆಗ ನಾನು ಕನ್ನಡ ಮಾತನಾಡುತ್ತಿದ್ದೆ’ ಎಂದು ಶಾರುಖ್ ಖಾನ್ ಅವರು 2013ರಲ್ಲಿ ಹೇಳಿದ್ದರು.
ನನ್ನ ತಾಯಿ ಆಂಧ್ರ ಪ್ರದೇಶದವರು. ಅವರು ಕರ್ನಾಟಕದಲ್ಲಿ ಇದ್ದರು. ಅವರಿಗೆ ನಾಲ್ಕು ಭಾಷೆ ಬರುತ್ತಿತ್ತು. ನಾನು ಐದು ವರ್ಷಗಳವರೆಗೆ ಮಂಗಳೂರಿನಲ್ಲಿ ಇದ್ದೆ. ನನ್ನ ಚಿಕ್ಕ ವಯಸ್ಸಿನ ಕೆಲವು ಫೋಟೋಗಳು ಇವೆ. ಮಂಗಳೂರಿನ ನೆನಪು ಎಂದರೆ ಅವು ಮಾತ್ರ. ಇದನ್ನು ಬಿಟ್ಟು ಅಲ್ಲಿಯ ಮತ್ಯಾವ ನೆನಪುಗಳೂ ನನಗೆ ಇಲ್ಲ’ ಎಂದು ಶಾರುಖ್ ಖಾನ್ ಹೇಳಿಕೊಂಡಿದ್ದರು.
ನಾನು ಐದು ವರ್ಷಗಳವರೆಗೆ ಅಜ್ಜಿಯ ಜೊತೆ ಇದ್ದೆ. ಅವರು ಮಂಗಳೂರಿನಲ್ಲಿ ಇದ್ದರು. ನನ್ನ ನೋಡಿಕೊಳ್ಳುವ ಜವಾಬ್ದಾರಿ ಅಜ್ಜಿಗೆ ವಹಿಸಲಾಗಿತ್ತು. ಬಹುಶಃ ಆ ಬಳಿಕ ಅಮ್ಮನಿಗೆ ನನ್ನ ಬಿಟ್ಟಿರಲಾಗಲಿಲ್ಲ ಎನಿಸುತ್ತದೆ. ಹೀಗಾಗಿ, ಅವರು ನನ್ನನ್ನು ಕರೆದುಕೊಂಡು ಹೋದರು’ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






