SSLC, PUC, ಡಿಗ್ರಿ ಪಾಸಾಗಿದ್ಯಾ!? ಹಾಗಿದ್ರೆ ITBP ನಲ್ಲಿದೆ ಭರ್ಜರಿ ಉದ್ಯೋಗವಕಾಶ! ಇಂದೇ ಅಪ್ಲೈ ಮಾಡಿ!

ಡಿಸೆಂಬರ್ 15, 2024 - 08:47
 0  12
SSLC, PUC, ಡಿಗ್ರಿ ಪಾಸಾಗಿದ್ಯಾ!? ಹಾಗಿದ್ರೆ ITBP ನಲ್ಲಿದೆ ಭರ್ಜರಿ ಉದ್ಯೋಗವಕಾಶ! ಇಂದೇ ಅಪ್ಲೈ ಮಾಡಿ!

SSLC, PUC, ಡಿಗ್ರಿ ಪಾಸಾಗಿದ್ದು ಮನೆಯಲ್ಲೇ ಕೂತಿರುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಐಟಿಬಿಪಿಎಫ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್- ಬಿ ಮತ್ತು ಸಿ ಹುದ್ದೆಗಳನ್ನು ತುಂಬಲಾಗುತ್ತಿದೆ. ಅಪ್ಲೇ ಮಾಡಲು ನಾಳೆಯೇ ಕೊನೆ ದಿನವಾಗಿದೆ. ಹೀಗಾಗಿ ಕೂಡಲೇ ಆಸಕ್ತಿ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು.

500ಕ್ಕೂ ಅಧಿಕ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಭಾರತ ಸರ್ಕಾರದ ಅಡಿ ಕೆಲಸ ನಿರ್ವಹಿಸಲು ಆಸಕ್ತಿವುಳ್ಳ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. 

ವಿದ್ಯಾರ್ಹತೆ (ಹುದ್ದೆಗೆ ತಕ್ಕಂತೆ)

ಬಿಎಸ್​ಸಿ, ಬಿಟೆಕ್, ಬಿಸಿಎ
ಪಿಯುಸಿ (ಪಿಸಿಎಂ), ಐಟಿಐ, ಡಿಪ್ಲೋಮಾ
10ನೇ ತರಗರಿ ಪೂರ್ಣವಾಗಿರಬೇಕು

ಮಾಸಿಕ ಸಂಭಾವನೆ

ಸಬ್​ಇನ್​ಸ್ಪೆಕ್ಟರ್- ₹35,400 ರಿಂದ ₹ 1,12,400
ಹೆಡ್​ ಕಾನ್​ಸ್ಟೆಬಲ್- ₹25,500 ರಿಂದ ₹ 81,100
ಕಾನ್​ಸ್ಟೆಬಲ್- ₹21,700 ರಿಂದ ₹ 69,100

ಅಭ್ಯರ್ಥಿಗಳಿಗೆ ವಯಸ್ಸು ಎಷ್ಟಿರಬೇಕು?

ಸಬ್​ಇನ್​ಸ್ಪೆಕ್ಟರ್- 20 ರಿಂದ 25 ವರ್ಷಗಳು
ಹೆಡ್​ ಕಾನ್​ಸ್ಟೆಬಲ್- 18 ರಿಂದ 25 ವರ್ಷಗಳು
ಕಾನ್​ಸ್ಟೆಬಲ್- 18 ರಿಂದ 23 ವರ್ಷಗಳು

ಹುದ್ದೆ ಹೆಸರು, ಎಷ್ಟು ಉದ್ಯೋಗಗಳು?

ಟೆಲಿಕಮ್ಯುನಿಕೇಶನ್ ಅಡಿ ಇರುವ ಕೆಲಸಗಳು ಇವು
ಸಬ್​ಇನ್​ಸ್ಪೆಕ್ಟರ್- 78
ಸಬ್​ಇನ್​ಸ್ಪೆಕ್ಟರ್ (ಮಹಿಳೆಯರು)- 14
ಹೆಡ್​ ಕಾನ್​ಸ್ಟೆಬಲ್- 325
ಹೆಡ್​ ಕಾನ್​ಸ್ಟೆಬಲ್ (ಮಹಿಳೆಯರು)- 58
ಕಾನ್​ಸ್ಟೆಬಲ್- 44
ಕಾನ್​ಸ್ಟೆಬಲ್ (ಮಹಿಳೆಯರು)- 07

ಒಟ್ಟು ಹುದ್ದೆಗಳು- 526

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow