ಗೃಹಿಣಿಯರೇ ಅಡುಗೆ ಮನೆಗೆ ಹೋಗೋ ಮುನ್ನ ಈ ಸುದ್ದಿ ನೋಡಿ!ಈ ಎರಡು ಪಾತ್ರೆಗಳನ್ನು ಮಗುಚಿದ್ರೆ ದಾರಿದ್ರ್ಯ ಒಕ್ಕರಿಸತ್ತೆ!

ಡಿಸೆಂಬರ್ 15, 2024 - 07:19
 0  13
ಗೃಹಿಣಿಯರೇ ಅಡುಗೆ ಮನೆಗೆ ಹೋಗೋ ಮುನ್ನ ಈ ಸುದ್ದಿ ನೋಡಿ!ಈ ಎರಡು ಪಾತ್ರೆಗಳನ್ನು ಮಗುಚಿದ್ರೆ ದಾರಿದ್ರ್ಯ ಒಕ್ಕರಿಸತ್ತೆ!

ಅಡುಗೆ ಮನೆ ಬಹಳ ಮುಖ್ಯವಾದ ಭಾಗ. ಅಲ್ಲಿ ಅಮ್ಮ ಇರುತ್ತಾಳೆ. ಚಿಕ್ಕಂದಿನಲ್ಲಿ ಅಡುಗೆ ಮನೆಯಲ್ಲಿ ಜೊತೆಯಾಗಿ ಎಲ್ಲರೂ ಕುಳಿತು ಊಟ ಮಾಡಿದ ನೆನಪಿರುತ್ತದೆ. ಜೊತೆಗೆ ಅಡುಗೆ ಮನೆ ನಿಮ್ಮ ಮನೆಯ ಅಭಿವೃದ್ಧಿಯ ಸಂಕೇತವೂ ಹೌದು. 

ಜೀವನದಲ್ಲಿ ಧನಾತ್ಮಕ ಶಕ್ತಿ ಬಹಳ ಮುಖ್ಯ. ನಾವು ಧನಾತ್ಮಕವಾಗಿ ಯೋಚಿಸಿದರೆ ನಮ್ಮ ಜೀವನವೂ ಸಹ ಧನಾತ್ಮಕವಾಗಿರುತ್ತದೆ. ಅದಕ್ಕಾಗಿಯೇ ನಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿಯ ಪ್ರಾಮುಖ್ಯತೆಯು ಹೆಚ್ಚು ಹೆಚ್ಚಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಧನಾತ್ಮಕ ಶಕ್ತಿಯೊಂದಿಗೆ ವಿಭಿನ್ನ ಸಂಬಂಧವನ್ನು ಹೊಂದಿದೆ. ಅನೇಕ ಜನರು ತಮ್ಮ ಸಣ್ಣ ತಪ್ಪುಗಳಿಂದ ಮನೆಯಲ್ಲಿ ವಾಸ್ತು ದೋಷಗಳಿಗೆ ಕಾರಣರಾಗುತ್ತಾರೆ. ಅಂತಹ ಸಂದರ್ಭದಲ್ಲಿ, ದೋಷವನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಡುಗೆ ಕೋಣೆಗೆ ಸಂಬಂಧಿಸಿದ ವಾಸ್ತು ದೋಷಗಳು ಮತ್ತು ಅವುಗಳ ಪರಿಹಾರ ಕ್ರಮದ ಕುರಿತು ಮಾಹಿತಿ ಇಲ್ಲಿದೆ ನೋಡಿ

ಅಡುಗೆಮನೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಡುಗೆಮನೆಯಲ್ಲಿ ಅನೇಕ ಪಾತ್ರೆಗಳ ಬಳಕೆಯಾಗುತ್ತವೆ. ಆ ಪೈಕಿ ಈ ಎರಡು ಪಾತ್ರೆಯನ್ನು ಮಗುಚಿ ಇಡಲೇ ಬಾರದು.   

ಚಪಾತಿ, ದೋಸೆ ಮಾಡುವ ಕಾವಲಿಯನ್ನು ಎಂದಿಗೂ ಮಗುಚಿ ಹಾಕಬಾರದು. ಹೀಗೆ ಮಾಡಿದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎನ್ನುತ್ತದೆ ವಾಸ್ತು. ಸಾಲ ಹೆಚ್ಚಾಗಿ, ಜೀವನದಲ್ಲಿ ಬಡತನವನ್ನು ಎದುರಿಸಬೇಕಾಗಬಹುದು.  

ಇದರ ಜೊತೆಗೆ ಬಾಣಲೆಯನ್ನು ಕೂಡಾ ಮಗುಚಿ ಇಡಬಾರದು ಎನ್ನುವ ನಿಯಮ ವಾಸ್ತುಶಾಸ್ತ್ರದಲ್ಲಿದೆ. ಅಡುಗೆ ಮನೆಯಲ್ಲಿ ಬಾಣಲೆಯನ್ನು ಮಗುಚಿ ಹಾಕಿದರೆ  ನಕಾರಾತ್ಮಕ ಶಕ್ತಿಯ ಮನೆ ತುಂಬಾ ಹರಿದಾಡುತ್ತದೆಯಂತೆ.   

ಈ ಎರಡು ಪಾತ್ರೆಗಳನ್ನು ಅಡುಗೆಮನೆಯಲ್ಲಿ ಮಗುಚಿ ಹಾಕಿದರೆ ಕುಟುಂಬ ಸದಸ್ಯರ ಪ್ರಗತಿಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವುದು. ಸಣ್ಣ ಸಣ್ಣ ವಿಚಾರಗಳಿಗೂ ಜಗಳ ಮನಸ್ತಾಪ ಎದುರಾಗುವುದು.

ಅಡುಗೆ ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಎಂಜಲು ಪಾತ್ರೆಗಳೆಲ್ಲವೂ ಸ್ವಚ್ಚವಾಗಿರಬೇಕು.  ಎಂಜಲು ಪಾತ್ರೆ ಅಥವಾ ಉಪಯೋಗಿಸಿದ ಪಾತ್ರೆಯನ್ನು ಹಾಗೆಯೇ ಬಿಟ್ಟು ಮಲಗಿದರೆ ಲಕ್ಷ್ಮೀ ಆ ಮನೆಯಲ್ಲಿ ನೆಲೆಸುವುದಿಲ್ಲವಂತೆ.   

ವಾಸ್ತು ತಜ್ಞರ ಪ್ರಕಾರ ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ಸದಾಕಾಲ ಪಶ್ಚಿಮ ದಿಕ್ಕಿನಲ್ಲಿಯೇ ಇಡಬೇಕು.ಈ ದಿಕ್ಕಿನಲ್ಲಿ ಪಾತ್ರೆಗಳನ್ನು ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow