BBK11: ಇಂದು ಕಿಚ್ಚನ ಪಂಚಾಯತಿ! ಯಾರಿಗೆಲ್ಲಾ ಕ್ಲಾಸ್? ಈ ವಾರ ಡಬಲ್​ ಎಲಿಮಿನೇಷನ್ ಫಿಕ್ಸ್​?

ಡಿಸೆಂಬರ್ 14, 2024 - 20:02
 0  19
BBK11: ಇಂದು ಕಿಚ್ಚನ ಪಂಚಾಯತಿ! ಯಾರಿಗೆಲ್ಲಾ ಕ್ಲಾಸ್? ಈ ವಾರ ಡಬಲ್​ ಎಲಿಮಿನೇಷನ್ ಫಿಕ್ಸ್​?

ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿರುವ ಪೈಕಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಈ ವಾರ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್​ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್​ನಲ್ಲಿ ಇದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಧನರಾಜ್ ಅವರಿಗೆ ಎಲಿಮಿನೇಟ್ ಆಗುವ ಭಯ ಹೆಚ್ಚಿದೆ.

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 12ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಹೌದು, ಪ್ರತಿ ವಾರದಂತೆ ಈ ಬಾರಿಯೂ ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ.

ಇನ್ನೂ ಈ 8 ಮಂದಿ ಪೈಕಿ ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಆದರೆ ಇದರ ಮಧ್ಯೆ ಕಳೆದ ವಾರ ಯಾವ ಸ್ಪರ್ಧಿ ಎಲಿಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ಡಬಲ್​ ಎಲಿಮಿನೇಷನ್​ ಇರುತ್ತಾ? ಅಥವಾ ಕೊನೆಯ ಕ್ಷಣದಲ್ಲಿ ಮತ್ತೆ ಬಿಗ್​ಬಾಸ್​ ಟ್ವಿಸ್ಟ್​ ಕೊಡಲಿದ್ದಾರಾ ಅಂತ ತಿಳಿದು ಬರಲಿದೆ.

ನೋಡ ನೋಡುತ್ತಿದ್ದಂತೆ ಬಿಗ್​ಬಾಸ್​ ಸೀಸನ್​ 11, 75ನೇ ದಿನಕ್ಕೆ ಕಲಿಟ್ಟಿದೆ. ಶನಿವಾರದ ಪಂಜಾಯ್ತಿಗೆ ಕಿಚ್ಚ ಸುದೀಪ ಎಂಟ್ರಿಗಾಗಿ ಅಭಿಮಾನಿಗಳು ಹಾಗೂ ಸ್ಪರ್ಧಿಗಳು ಕಾಯುತ್ತಿದ್ದಾರೆ. ಈ ವಾರ ಸೇಫ್​ ಆಗಿರೋ ಸ್ಪರ್ಧಿಗಳ ಹೆಸರನ್ನು ಕಿಚ್ಚ ಸುದೀಪ್​ ಘೋಷಣೆ ಮಾಡಲಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಓರ್ವ ಸ್ಪರ್ಧಿಯನ್ನು ಬಿಗ್​ಬಾಸ್​ ಮನೆಯಿಂದ ಆಚೆ ಕಳುಹಿಸಲಿದ್ದಾರೆ.

ಈ ವಾರ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಗೆಳತಿ.. ಗೆಳತಿ ಅಂದುಕೊಂಡಿದ್ದ ಮಂಜು ಹಾಗೂ ಗೌತಮಿ ಮಧ್ಯೆ ಬಿರುಕು ಮೂಡಿದೆ. ಮತ್ತೊಂದು ಕಡೆ ವೈಲ್ಡ್ ಕಾರ್ಡ್​ ಸ್ಪರ್ಧಿ ರಜತ್​ ಏಕಾಏಕಿ ಧನರಾಜ್​ ಆಚಾರ್ಯ ಮೇಲೆ ಕೈ ಮಾಡಲು ಹೋಗಿದ್ದರು. ಕಳೆದ ವಾರ ನಾಮಿನೇಷನ್​ನಿಂದ ಸೇಫ್​ ಆಗಿದ್ದ ಚೈತ್ರಾ ಕುಂದಾಪುರ ಈ ಬಾರಿ ಏನಾಗ್ತಾರೆ ಅಂತ ಇಂದಿನ ವಾರದ ಕತೆ ಕಿಚ್ಚನ ಪಂಜಾಯ್ತಿಯಲ್ಲಿ ತಿಳಿದು ಬರಲಿದೆ. ಅಲ್ಲದೇ ಕಿಚ್ಚ ಸುದೀಪ್ ತಮ್ಮ ಪಂಚಾಯ್ತಿಯಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಾರೆ. ಹಾಗೆಯೇ ತಪ್ಪು ಮಾಡಿದ ಯಾವ ಸ್ಪರ್ಧಿಗೆ ಕ್ಲಾಸ್​ ತೆಗೆದುಕೊಳ್ತಾರೆ ಅಂತಾ ತಿಳಿದುಕೊಳ್ಳಲು ವೀಕ್ಷಕರು ಎಕ್ಸೈಟ್ ಆಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow