ಎಂದಾದರೂ ಗೋಲ್ಡ್ ಟೀ ಕುಡಿದಿದ್ದೀರಾ!? ಇದರ ಬೆಲೆ, ವಿಶೇಷತೆ ಬಗ್ಗೆ ತಿಳಿಯಿರಿ!

ನೀವು ಚಹಾ ಪ್ರಿಯರಾ? ಶುಂಟಿ ಟೀ, ಲೆಮನ್ ಟೀ, ಬ್ಲಾಕ್ ಟೀ, ಗ್ರೀನ್ ಟೀ, ಮಸಾಲ ಟೀ, ಏಲಕ್ಕಿ ಟೀ ಹೀಗೆ ನಾನಾ ರೀತಿಯ ಚಹಾಗಳನ್ನು ನೀವು ಸೇವಿಸಿರಬಹುದು. ಆದರೆ, ಯಾವತ್ತಾದರೂ ಗೋಲ್ಡ್ ಟೀ ಸೇವಿಸಿದ್ದೀರಾ!? ಹಾಗಿದ್ರೆ ಇಲ್ಲಿ ತಿಳಿಯಿರಿ.
ಇತ್ತೀಚೆಗೆ ದುಬೈನಲ್ಲಿ ಭಾರತೀಯ ಮೂಲದವರೊಬ್ಬರು ಇಂಡಿಯನ್ ಕೆಫೆ ಶುರು ಮಾಡಿದ್ದಾರೆ. ಅವರು ಅಲ್ಲಿ ನೀಡುವ ಒಂದು ವಿಶೇಷ ಚಹಾದ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಅಂದ್ರೆ ನೀವು ನಂಬಲೇಬೇಕು
ಆ ಚಹಾದ ಹೆಸರು ಗೋಲ್ಡ್ ಕರಕ್ ಚಹಾ ಅಂತ ಅದು ಯುನೈಟೆಡ್ ಅರಬ್ ಎಮಿರೆಟ್ಸ್ ಕರೆನ್ಸಿಯಲ್ಲಿ 5000 ದಿರ್ಹಾಮ್ ಅಂದ್ರೆ ಭಾರತದ ಕರೆನ್ಸಿಯಲ್ಲಿ ಅದರ ಬೆಲೆ ಬರೋಬ್ಬರಿ 1.14 ಲಕ್ಷ ರೂಪಾಯಿ.
ದುಬೈ ಮೂಲದ ಕೆಫೆ ಇದು. ಇದನ್ನು ಭಾರತೀಯ ಮೂಲದ ಉದ್ಯಮಿಯಾದ ಸುಚೇತಾ ಶರ್ಮಾ ಎಂಬುವವರು ನಡೆಸುತ್ತಾರೆ. ಅವರು ತಮ್ಮ ಕೆಫೆಯಲ್ಲಿ ನೀಡುತ್ತಿರುವ 1 ಲಕ್ಷ ರೂಪಾಯಿಯ ಬೆಲಯ ಚಹಾ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ
ಡಿಐಎಫ್ಸಿಎಸ್ ಎಮಿರೆಟ್ಸ್ ಫೈನಾನ್ಸಿಯಲ್ ಟವರ್ನಲ್ಲಿ ಹೊಸದಾಗಿ ಶುರುವಾಗಿರುವ ಈ ಕೆಫೆಯಲ್ಲಿ ಈ ವಿಶೇಷ ಟೀಯನ್ನು ನೀಡಲಾಗುತ್ತದೆ. ಈ ಟೀಯನ್ನು ಬೆಳ್ಳಿಯ ಕಪ್ನಲ್ಲಿ 24 ಕ್ಯಾರೆಟ್ ಬಂಗಾರದ ಎಲೆಯೊಂದಿಗೆ ಅಲಂಕಾರ ಮಾಡಿ ನೀಡಲಾಗುತ್ತದೆ. ಇದು ಈಗ ವಿಶ್ವದಲ್ಲಿ ಕುತೂಹಲಕ್ಕೆ ಸೃಷ್ಟಿಯಾದಂತೆ ವಿವಾದಕ್ಕೂ ಕೂಡ ಕಾರಣವಾಗಿದೆ.
ಈ ಬಗ್ಗೆಯ ಕೆಫೆಯ ಮಾಲೀಕರು ಆದ ಸುಚಿತಾ ಮಾತನಾಡಿ, ಈ ಒಂದು ಲಕ್ಷ ರೂಪಾಯಿ ಚಹಾವನ್ನು ನಾವು ಬೆಳ್ಳಿ ಕಪ್ನಲ್ಲಿ ನೀಡುತ್ತೇವೆ. ಅದನ್ನು ಗಿರಾಕಿಗಳು ಮನೆಗೆ ಕೂಡ ತೆಗೆದುಕೊಂಡು ಹೋಗಬಹುದು. ಇದರೊಂದಿಗೆ ಬಂಗಾರದ ಎಲೆಯಿಂದ ಅದನ್ನು ಅಲಂಕಾರ ಮಾಡಿರುತ್ತೇವೆ ಹೀಗಾಗಿ ಒಂದು ಕಪ್ನ ಚಹಾದ ಬೆಲೆ ನಮಗೆ 4761 ದಿರ್ಹಾಮ್ ಆಗುತ್ತದೆ (1.9 ಲಕ್ಷ ರೂಪಾಯಿ) ನಾವು ಒಂದು ಟೀಯನ್ನು 5000 ದಿರ್ಹಾಮ್ಗೆ ಮಾರುತ್ತೇವೆ. ಕೇವಲ ಚಹಾ ಒಂದೇ ಅಲ್ಲ ನಾವು ಚಹಾದ ಜೊತೆ ಗೋಲ್ಡ್ ರಸ್ಟೆಡ್ ಕ್ರೊಯಿಸ್ಸಂಟ್, ಗೋಲ್ಡ್ ವಾಟರ್, ಗೋಲ್ಡ್ ಬರ್ಗರ್ ಹಾಗೂ ಗೋಲ್ಡ್ ಐಸ್ಕ್ರೀಮ್ ಕೂಡ ನೀಡುತ್ತೇವೆ ಎಂದು ಸುಚಿತಾ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






