ಥೂ ನಿಮ್ ಹರಾಜಿಗಷ್ಟು: ವಿಲ್ ಜಾಕ್ಸ್ ಕೈಬಿಟ್ಟ RCB ಮೇಲೆ ಫ್ಯಾನ್ಸ್ ಗರಂ!

ಮೆಗಾ ಹರಾಜಿನಲ್ಲಿ RCB ಪ್ರಾಂಚೈಸಿ ತೆಗೆದುಕೊಂಡ ಕೆಲವು ಅಚ್ಚರಿ ನಿರ್ಧಾರಗಳು ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ. ಹಲವು ವರ್ಷದಿಂದ ತಂಡದ ಜೀವಾಳವಾಗಿದ್ದ ಸಿರಾಜ್ ಅವರು ಸೇರಿ ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಪರ ಆಡಿದ್ದ ವಿಲ್ ಜಾಕ್ಸ್ ಅವರನ್ನು ಕೂಡ RCB ಕೈ ಬಿಟ್ಟಿದ್ದಾರೆ. ಈ ನಿರ್ಧಾರ ಆರ್‌ಸಿಬಿ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.
ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಪರ ಚೆನ್ನಾಗಿಯೇ ಆಡಿದ್ರು. ಇವರನ್ನು ದಯವಿಟ್ಟು ಉಳಿಸಿಕೊಳ್ಳಿ ಅಂತ ಅಭಿಮಾನಿಗಳು ಆರ್‌ಸಿಬಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೂ ಆರ್‌ಸಿಬಿ ಕ್ಯಾರೇ ಅಂದಿಲ್ಲ
ಬೆಂಗಳೂರು ಪರ 8 ಪಂದ್ಯಗಳನ್ನು ವಿಲ್ ಜಾಕ್ಸ್ ಆಡಿದ್ದರು. ಈ 8 ಪಂದ್ಯಗಳಿಂದ 230 ರನ್‌ಗಳಿಸಿದ್ದಾರೆ. ಇದರಲ್ಲಿ ಒಂದು ಸೆಂಚುರಿ, ಒಂದು ಅರ್ಧಶತಕ ಕೂಡ ಬಾರಿಸಿದ್ದಾರೆ. ಆರ್‌ಸಿಬಿ ಸಂಕಷ್ಟದಲ್ಲಿದ್ದಾಗ ನೆರವಾಗಿದ್ದಾರೆ.
ವಿಲ್ ಜ್ಯಾಕ್ಸ್ ಆರ್‌ಸಿಬಿ ಬಿಡ್ ಮಾಡಲೇ ಇಲ್ಲ. ಮುಂಬೈ ಇಂಡಿಯನ್ಸ್ ತಂಡ ವಿಲ್ ಜಾಕ್ಸ್‌ಗೆ ಮೊದಲಿನಿಂದಲೂ ಬಿಡ್ ಮಾಡಿಕೊಂಡೇ ಬಂತು. ಕೊನೆಗೆ 5.25 ಕೋಟಿ ಕೊಟ್ಟು ಖರೀದಿ ಮಾಡಿದೆ.
ಒಟ್ಟಾರೆ RCB ಪ್ರಾಂಚೈಸಿ ನಿರ್ಧಾರ ಬೇಸರ ತರಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕೆಂಡಕಾರುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






