ರೈಲ್ವೆ ನೇಮಕಾತಿ 2025: 368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ರೈಲ್ವೆ ನೇಮಕಾತಿ ಮಂಡಳಿ (RRB) 368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳನ್ನು ಭರ್ತಿ ಮಾಡಲು ಕಿರು ಅಧಿಸೂಚನೆಯನ್ನು ಹೊರಡಿಸಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrbcdg.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಹತೆ:
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ಹೊಂದಿರಬೇಕು. ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 33 ವರ್ಷ ಇರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ನೀಡಲಾಗುತ್ತದೆ.
ವಲಯವಾರು ಹುದ್ದೆಗಳ ವಿವರ:
-
ಕೇಂದ್ರ ರೈಲ್ವೆ: 25
-
ಪೂರ್ವ ಕರಾವಳಿ ರೈಲ್ವೆ: 24
-
ಪೂರ್ವ ಮಧ್ಯ ರೈಲ್ವೆ: 32
-
ಪೂರ್ವ ರೈಲ್ವೆ: 39
-
ಉತ್ತರ ಮಧ್ಯ ರೈಲ್ವೆ: 16
-
ಈಶಾನ್ಯ ರೈಲ್ವೆ: 9
-
ಈಶಾನ್ಯ ಗಡಿನಾಡು ರೈಲ್ವೆ: 21
-
ಉತ್ತರ ರೈಲ್ವೆ: 24
-
ವಾಯುವ್ಯ ರೈಲ್ವೆ: 30
-
ದಕ್ಷಿಣ ಮಧ್ಯ ರೈಲ್ವೆ: 20
-
ಆಗ್ನೇಯ ಮಧ್ಯ ರೈಲ್ವೆ: 26
-
ಆಗ್ನೇಯ ರೈಲ್ವೆ: 12
-
ದಕ್ಷಿಣ ರೈಲ್ವೆ: 24
-
ನೈಋತ್ಯ ರೈಲ್ವೆ: 24
-
ಪಶ್ಚಿಮ ಮಧ್ಯ ರೈಲ್ವೆ: 7
-
ಪಶ್ಚಿಮ ರೈಲ್ವೆ: 35
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ಅಭ್ಯರ್ಥಿಗಳು ಮೊದಲು rrbapply.gov.in ಗೆ ಭೇಟಿ ನೀಡಿ ಖಾತೆ ರಚಿಸಬೇಕು. ಬಳಿಕ ಲಾಗಿನ್ ಆಗಿ ವಿವರಗಳನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ:
-
ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್: 500 ರೂ.
-
ಎಸ್‌ಸಿ/ಎಸ್‌ಟಿ: 250 ರೂ.
ಅರ್ಜಿಯನ್ನು ಆನ್‌ಲೈನ್ ಬ್ಯಾಂಕಿಂಗ್/ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ನಿಮ್ಮ ಪ್ರತಿಕ್ರಿಯೆ ಏನು?