ಜೋಧ್‌ಪುರ| ರೈಲು ಹಳಿ ಮೇಲಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ವಂದೇ ಭಾರತ್ ಡಿಕ್ಕಿ – ತಪ್ಪಿದ ಭಾರೀ ಅನಾಹುತ.

ಜೋಧ್‌ಪುರ| ರೈಲು ಹಳಿ ಮೇಲಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ವಂದೇ ಭಾರತ್ ಡಿಕ್ಕಿ – ತಪ್ಪಿದ ಭಾರೀ ಅನಾಹುತ.
ಅಹ್ಮದಾಬಾದ್- ಜೋಧ್‌ಪುರಗೆ (Ahmedabad-Jodhpur) ಹೋಗುವ ವಂದೇ ಭಾರತ್ ರೈಲು ಹಳಿಗಳ ಮೇಲಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ಡಿಕ್ಕಿ ಹೊಡೆದಿರುವ ಘಟನೆ ರಾಜಸ್ತಾನದ ಪಾಲಿ ಎಂಬಲ್ಲಿ ಆಗಸ್ಟ್ 23ಕ್ಕೆ ನಡೆದಿದೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ಜವಾಯಿ ಹಾಗೂ ಬಿರೋಲಿಯಾ ನಡುವೆ ರೈಲು ಚಲಿಸುತ್ತಿರುವಾಗ ಎಂಜಿನ್ ಸಿಮೆಂಟ್ ಸ್ಲ್ಯಾಬ್‌ಗೆ ಡಿಕ್ಕಿ ಹೊಡೆದಿದೆ.
ಘಟನೆಯ ಬಗ್ಗೆ ವಾಯುವ್ಯ ಅಧಿಕಾರಿ (ಸಿಪಿಆರ್‌ಒ) ಶಶಿಕಿರಣ್ ಮಾತನಾಡಿ, ಘಟನೆಯಿಂದ ರೈಲು ಬರುವಾಗ 8 ನಿಮಿಷ ತಡವಾಗಿ ಬಂದಿದೆ. ಇದರ ಹೊರತಾಗಿ ಯಾವ ಪ್ರಯಾಣಿಕರಿಗೂ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






