ನೆನಪಿರಲಿ ಪ್ರೇಮ್ʼಗೆ ಬಿಗ್ ಶಾಕ್: ಖ್ಯಾತ ನಿರ್ದೇಶಕಿಯಿಂದ ಗಂಭೀರ ಆರೋಪ! ನಟನ ಪ್ರತಿಕ್ರಿಯೆ ಏನು..?

ನೆನಪಿರಲಿ ಸಿನಿಮಾ ಖ್ಯಾತಿಯ ಪ್ರೇಮ್ ಅವರಿಗೆ ಬಿಗ್ ಶಾಕ್ ಎದುರಾಗಿದ್ದು, ಖ್ಯಾತ ನಿರ್ದೇಶಕಿಯಿಂದ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಹುಟ್ಟು ಹಬ್ಬದ ದಿನವೇ ನಟ ಪ್ರೇಮ್ ವಿರುದ್ಧ ಆರೋಪ ಕೇಳಿ ಬಂದಿದೆ. ಅಲ್ಲದೇ ನಟ ಪ್ರೇಮ್ಗೆ ಕಾನೂನು ಸಂಕಷ್ಟ ಎದುರಾಗೋ ಸಾಧ್ಯತೆ ಇದೆ.
ಅನುಮತಿ ಇಲ್ಲದೇ ರಮೇಶ್ ಇಂದಿರಾ ಫೋಟೋವನ್ನು ಚಿತ್ರತಂಡ ಬಳಸಿದೆ. ಅಲ್ಲದೇ ಪೋಸ್ಟರ್ನಲ್ಲಿ ರಮೇಶ್ ಇಂದಿರಾ ಭೀಮ ಚಿತ್ರಕ್ಕೆ ತೆಗೆಸಿದ್ದ ಫೋಟೊ ಹಿಡಿದು ಪೋಸ್ ಕೊಟ್ಟಿದ್ದಾರೆ. ಹೀಗಾಗಿ ಸ್ಪಾರ್ಕ್ ಸಿನಿಮಾ ತಂಡದ ವಿರುದ್ಧ ಶೃತಿ ನಾಯ್ಡು ಬೇಸರ ಹೊರ ಹಾಕಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಈ ಚಿತ್ರ ತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ. ಪತ್ರಿಕೆಯ ಕಟ್ಟಿಂಗ್ನಲ್ಲಿರುವ ಈ ಚಿತ್ರವನ್ನು ನಟನ ಅನುಮತಿ ಪಡೆಯದೇ ಪೋಸ್ಟ್ ಮಾಡಿದ್ದಾರೆ. ನಟ ಹಿಡಿದುಕೊಂಡ ಪೋಸ್ಟರ್ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ಭೀಮಾ ಚಿತ್ರದ್ದು.
ಅದರಲ್ಲಿರೋ ಫೋಟೋವನ್ನು ಭೀಮಾ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟನಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಬರೆದುಕೊಂಡಿದ್ದಾರೆ.
ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನಟ ನೆನಪಿರಲಿ ಪ್ರೇಮ್, ‘ಅದರ ಬಗ್ಗೆ ನನಗೆ ಜಾಸ್ತಿ ಮಾಹಿತಿ ಇಲ್ಲ, ನಮ್ ನಿರ್ದೇಶಕರ ಜೊತೆ ಮಾತಾಡ್ತಿನಿ, ವಿಷಯ ಏನು ಅಂತಾ ತಿಳ್ಕೊಂಡು ಆ ಬಳಿಕ ಪ್ರತಿಕ್ರಿಯೆ ನೀಡುತ್ತೀನಿ, ನಾನು ಬರ್ತ್ ಡೇಯಲ್ಲಿ ಬ್ಯುಸಿ ಇದ್ದ ಕಾರಣ ಡೈರೆಕ್ಟರ್ ಜೊತೆನೂ ಮಾತಾಡೋಕೆ ಆಗಿಲ್ಲ’ ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






