Saif Ali Khan: 15,000 ಕೋಟಿ ರೂ. ಪೂರ್ವಜರ ಆಸ್ತಿ ಕಳೆದುಕೊಂಡ ಬಾಲಿವುಡ್ ನಟ..! ಹೇಗೆ..?
ಭೋಪಾಲ್: ಬಾಲಿವುಡ್ ನವಾಬ್ ಹಾಗೂ ಪಟೌಡಿ ರಾಜವಂಶದ ವಾರಸುದಾರ ಸೈಫ್ ಅಲಿ ಖಾನ್ ಅವರಿಗೆ ಭೋಪಾಲದಲ್ಲಿನ ₹15,000 ಕೋಟಿಗೂ ಮಿಕ್ಕಿ ಮೌಲ್ಯದ ಆಸ್ತಿಯ ಹಕ್ಕು ತಪ್ಪಿದ ಸುದ್ದಿ ಬಹಿರಂಗವಾಗಿದೆ. ಮಧ್ಯ ಪ್ರದೇಶ ಹೈಕೋರ್ಟ್‌ನ ಇತ್ತೀಚಿನ ತೀರ್ಪಿನಲ್ಲಿ, ಭೋಪಾಲ್ ನವಾಬರ ಅರಮನೆ ಹಾಗೂ ಆಸ್ತಿಯನ್ನು ‘ಶತ್ರು ಆಸ್ತಿ’ಯೆಂದು ಪರಿಗಣಿಸಿದ್ದು, ಸೈಫ್ ಅವರ ಕುಟುಂಬಕ್ಕೆ ಯಾವುದೇ ಹಕ್ಕಿಲ್ಲ ಎಂದು ಘೋಷಿಸಿದೆ.
1999 ರಲ್ಲಿ ಎರಡು ಸಿವಿಲ್ ಮೊಕದ್ದಮೆಗಳನ್ನು ಭೋಪಾಲದ ನವಾಬ್ ಆಸ್ತಿಯ ಕುರಿತಾಗಿ ಹೂಡಲಾಯಿತು. ಆಸ್ತಿಯ ವಿಭಜನೆ, ಸ್ವಾಧೀನ ಮತ್ತು ಪೂರ್ವಜರ ಆಸ್ತಿಯ ಸರಿಯಾದ ಲೆಕ್ಕಪತ್ರವನ್ನು ಕೋರಿ ಅರ್ಜಿಗಳನ್ನು ಹಾಕಲಾಗಿತ್ತು. 1960 ರಲ್ಲಿ ನವಾಬ್ ಹಮೀದುಲ್ಲಾ ಖಾನ್ ನಿಧನದ ಬಳಿಕ ಭೂಪಾಲದ ಆಸ್ತಿಯ ವಿವಾದ ಪ್ರಾರಂಭವಾಯ್ತು.
ಮುಸ್ಲಿಂ ಪರ್ಸನಲ್ ಲಾ ಪ್ರಕಾರ, ನವಾಬ್ ಹಮೀದುಲ್ಲಾ ಖಾನ್ ಆಸ್ತಿಗೆ ಅವರ ಮಗಳು ಮಾತ್ರ ಪಾಲುದಾರರಲ್ಲದೆ, ಅವರ ಕುಟುಂಬದವರೆಲ್ಲ ಪಾಲುದಾರರು ಎಂದು ಪರಿಗಣಿಸಬೇಕು ಎಂದಿದೆ.
ಆದರೆ 1962ರಲ್ಲಿ ಸರ್ಕಾರ ಬರೆದಿರುವ ಪತ್ರದಂತೆ ನವಾಬ್ ಹಮೀದುಲ್ಲಾ ಖಾನ್ ಪುತ್ರ ಸಜಿದಾ ಸುಲ್ತಾನ್ ಮಾತ್ರವೇ ಅವರ ತಂದೆಯ ಆಸ್ತಿಯ ಒಡತಿ ಎಂದು ಘೋಷಿಸಿತು. 1949ರ ವಿಲೀನ ಒಪ್ಪಂದದಂತೆ ಸಜಿದಾ ಸುಲ್ತಾನ್ ಅವರನ್ನು ಏಕೈಕ ಮಾಲಕಿ ಆಗಿ ಘೋಷಿಸಲಾಗಿತ್ತು.
ನವಾಬ್ ಹಮೀದುಲ್ಲಾ ಖಾನ್ ಅವರ ಮಗಳು ಸಾಜಿದಾ ಸುಲ್ತಾನ್ (ಸೈಫ್ ಅಜ್ಜಿ) ಅವರಿಗೆ ಆಸ್ತಿ ಹಕ್ಕು ನೀಡಲಾಗಿದ್ದರೂ, 1962ರ ಸರಕಾರದ ಪತ್ರದ ಮೇರೆಗೆ ಅವರೊಬ್ಬರನ್ನೇ ಒಡೆಯರಾಗಿ ಘೋಷಿಸಲಾಗಿತ್ತು. ಈ ತೀರ್ಪು ಕೂಡ ಆ ಮೂಲದ ತೀರ್ಮಾನವನ್ನು ಬಲಪಡಿಸಿದೆ. ಈ ತೀರ್ಪು ಸೈಫ್ ಕುಟುಂಬಕ್ಕೆ ಆಘಾತ ನೀಡಿದರೂ, ಅವರು ಮುಂದಿನ ಹಂತದಲ್ಲಿ ಸುಪ್ರೀಂ ಕೋರ್ಟ್ ಮೆರೆಗೆ ಹೋಗುವ ಸಾಧ್ಯತೆ ಇದ್ದು, ಇನ್ನೂ ಮುಕ್ತಾಯವಾಗಿದೆ ಎಂದು ಹೇಳಲಾಗದು.
ನಿಮ್ಮ ಪ್ರತಿಕ್ರಿಯೆ ಏನು?