ರಾಸಲೀಲೆ ವಿಡಿಯೋ ಲೀಕ್‌ ಪ್ರಕರಣ: ಮಧುಗಿರಿ DYSP ರಾಮಚಂದ್ರಪ್ಪಗೆ 14 ದಿನ ನ್ಯಾಯಾಂಗ ಬಂಧನ

ಜನವರಿ 4, 2025 - 18:00
 0  17
ರಾಸಲೀಲೆ ವಿಡಿಯೋ ಲೀಕ್‌ ಪ್ರಕರಣ: ಮಧುಗಿರಿ DYSP ರಾಮಚಂದ್ರಪ್ಪಗೆ 14 ದಿನ ನ್ಯಾಯಾಂಗ ಬಂಧನ

ತುಮಕೂರು: ರಾಸಲೀಲೆ ವಿಡಿಯೋ ಪ್ರಕರಣದಲ್ಲಿ ಮಧುಗಿರಿ DYSP ರಾಮಚಂದ್ರಪ್ಪ ಅವರನ್ನ ಬಂಧಿಸಲಾಗಿತ್ತು. ಇದೀಗ  ಮಧುಗಿರಿ ಜೆಎಂಎಫ್‌ಸಿ ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸೋಮವಾರದವರೆಗೆ ಮಧುಗಿರಿ ಜೈಲಿನಲ್ಲಿರಿಸಿ, ನಂತರ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ.

ಜಿಲ್ಲೆಯ ಮಧುಗಿರಿ ಉಪವಿಭಾಗ ಡಿವೈಎಸ್ ಪಿ ಕಚೇರಿಗೆ ಪಾವಗಡ ಮೂಲದ ಮಹಿಳೆಯೊಬ್ಬರು ತಮ್ಮ ಜಮೀನಿನ ವ್ಯಾಜ್ಯ ವಿಚಾರಕ್ಕೆ ಮಧುಗಿರಿ ಡಿವೈಎಸ್​ಪಿ ರಾಮಚಂದ್ರಪ್ಪಗೆ ದೂರು ನೀಡಲು ಬಂದಿದ್ದರು. ಈ ವೇಳೆ ಡಿವೈಎಸ್​​ಪಿ ಆಕೆಯನ್ನ ಪುಸಲಾಯಿಸಿ ಕಚೇರಿಯಲ್ಲಿರುವ ಆ್ಯಂಟಿ ಚೇಂಬರ್​​ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕೃತ್ಯ ಮೊಬೈಲ್​​ಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಏನಿದು ರಾಸಲೀಲೆ ಪ್ರಕರಣ?
DYSP ರಾಮಚಂದ್ರಪ್ಪ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು ಮಹಿಳೆಯೊಬ್ಬರು ಆಗಮಿಸಿದ್ದರು. ಆಗ ತನ್ನ ಕಚೇರಿಯ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋಗಿದ್ದ ಡಿವೈಎಸ್‌ಪಿ ರಾಮಚಂದ್ರಪ್ಪ ಅವರು ರಾಸಲೀಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ತನ್ನ ಕಚೇರಿಯಲ್ಲೇ‌ ಮಹಿಳೆಯೊಂದಿಗೆ ಡಿವೈಎಸ್ಪಿ ರಾಸಲೀಲೆ ನಡೆಸಿದ್ದು, ಕಿಟಕಿ ಮೂಲಕ ವಿಡಿಯೋ ಚಿತ್ರೀಕರಣಗೊಂಡಿದ್ದು ವಿಡಿಯೋ ವೈರಲ್ ಆಗಿತ್ತು. ಮಧುಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋ ಗಂಭೀರ ಸ್ವರೂಪ ಪಡೆದಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow