SSLC ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ..! ಪರೀಕ್ಷಾ ಶುಲ್ಕದಲ್ಲಿ ಶೇ.5ರಷ್ಟು ಹೆಚ್ಚಳ
ಬೆಂಗಳೂರು: ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. ಈ ಬಾರಿ 10ನೇ ತರಗತಿ ವಾರ್ಷಿಕ ಪರೀಕ್ಷಾ ಶುಲ್ಕವನ್ನು 5% ಹೆಚ್ಚಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. 2025-26ನೇ ಸಾಲಿನ ಎಲ್ಲಾ ಪರೀಕ್ಷೆಗಳಿಗೆ ಪ್ರಸ್ತುತ ಇರುವ ದರಕ್ಕಿಂತ ಶೇ.5ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುವುದು.
ಹೊಸ ಶುಲ್ಕ ವಿವರಗಳು:
-
ಪ್ರಥಮ ಬಾರಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ: ₹676 → ₹710
-
ಹೊಸದಾಗಿ ನೋಂದಾಯಿಸುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಹಾಗೂ ಅರ್ಜಿ ಶುಲ್ಕ: ₹236 → ₹248
-
ಈಗಾಗಲೇ ನೋಂದಣಿಯಾಗಿರುವ ಖಾಸಗಿ ಅಭ್ಯರ್ಥಿಗಳ ನವೀಕರಣ ಶುಲ್ಕ: ₹69 → ₹72
-
ಪುನರಾವರ್ತಿತ ಶಾಲಾ/ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ:
-
ಒಂದು ವಿಷಯಕ್ಕೆ: ₹427 → ₹448
-
ಎರಡು ವಿಷಯಕ್ಕೆ: ₹532 → ₹559
-
ಮೂರು ಅಥವಾ ಹೆಚ್ಚು ವಿಷಯಗಳಿಗೆ: ₹716 → ₹752
-
ಪರೀಕ್ಷಾ ಶುಲ್ಕ ಏರಿಕೆಗೆ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಈ ನಿರ್ಧಾರದಿಂದ ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆರ್ಥಿಕ ಭಾರ ಉಂಟಾಗಲಿದೆ, ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?