ಹೃದಯ ವಿದ್ರಾವಕ ಘಟನೆ: ಮಹಿಳೆಯ ಪ್ರಿಯಕರನಿಂದಲೇ 2 ವರ್ಷದ ಮಗು ಮೇಲೆ ಅತ್ಯಾಚಾರ, ಕೊಲೆ..!

ಮುಂಬೈನ ಮಲಾಡ್ನ ಮಲವಾನಿ ಪ್ರದೇಶದಲ್ಲಿ ಆಘಾತಕಾರಿ ಮತ್ತು ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಹಿಳೆಯ ಎರಡೂವರೆ ವರ್ಷದ ಮಗಳನ್ನು ಕೊಂದು ಅತ್ಯಾಚಾರ ಮಾಡಿದ ಆರೋಪದ ಮೇಲೆ 30 ವರ್ಷದ ಮಹಿಳೆ (ಮಗುವಿನ ತಾಯಿ) ಮತ್ತು ಆಕೆಯ 19 ವರ್ಷದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು ಮುಂಬೈನ ಮಾಲ್ವಾನಿ ಪ್ರದೇಶದಲ್ಲಿ ಯಿಯ ಮುಂದೆ ಆಕೆಯ ಎರಡು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ 19 ವರ್ಷದ ಪ್ರಿಯಕರನನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ವರ್ಷದ ಮಗುವಿನ ಸಾವಿನ ಬಗ್ಗೆ ಆಸ್ಪತ್ರೆಯಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣ ಆಸ್ಪತ್ರೆಗೆ ತೆರಳಿ ತನಿಖೆ ನಡೆಸಿದರು. 2 ವರ್ಷದ ಬಾಲಕಿ ಆಘಾತದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಳೆ ಎಂದು ವೈದ್ಯರು ವರದಿ ನೀಡಿದ್ದಾರೆ. ಸಂಪೂರ್ಣ ತನಿಖೆಯ ನಂತರ, ಪೊಲೀಸರು ಮಗುವಿನ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಹಲವು ವಿಭಾಗಗಳ ಅಡಿಯಲ್ಲಿ ಬಂಧಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






