ಮನೆ ಮುಂದೆ ರಂಗೋಲಿ ಹಾಕುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು..?

ಹಿಂದೂ ಧರ್ಮದಲ್ಲಿ, ಅಂಗಳ ಅಥವಾ ಬಾಗಿಲಿಗೆ ರಂಗೋಲಿ ಬಿಡಿಸುವುದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ಸಂತೋಷ ಮತ್ತು ಸಮೃದ್ಧಿಯೊಂದಿಗೆ ಸಂಬಂಧ ಹೊಂದಿದೆ. ರಂಗೋಲಿ ಹಾಕುವುದು ಅಂದರೆ ಅದು ಕೇವಲ ಪ್ರದರ್ಶನವಲ್ಲ. ರಂಗೋಲಿ ಹಾಕುವುದರ ಹಿಂದೆ ಯಾವಾಗಲೂ ಒಳ್ಳೆಯ, ಉದಾತ್ತ ಆಶಯ, ಉದ್ದೇಶವಿರುತ್ತದೆ. ಅದಕ್ಕೇ ಆಗಿನ ಕಾಲದಲ್ಲಿ ರಂಗೋಲಿಯನ್ನು ಅಕ್ಕಿ ಹಿಟ್ಟಿನಲ್ಲಿ ಹಾಕುತ್ತಿದ್ದರು.
ನಮ್ಮ ಸುತ್ತಲಿನ ಎಲ್ಲಾ ಜೀವಿಗಳು ನಮ್ಮಂತೆಯೇ ಎಂದು ನಂಬಿರುವ ಧರ್ಮ ನಮ್ಮದು. ಅದಕ್ಕೇ ಮನೆಯ ಮುಂದೆ ಅಕ್ಕಿಹಿಟ್ಟು, ಅದರ ಉಂಡೆಗಳನ್ನು ಹಾಕಿ ಹಕ್ಕಿ, ಕಾಗೆ, ಅಳಿಲು, ಇರುವೆ, ಗುಬ್ಬಚ್ಚಿ, ಪಾರಿವಾಳ ಮತ್ತಿತರ ಕೀಟಗಳ ಹೊಟ್ಟೆ ತುಂಬಿಸುತ್ತಿದ್ದರು. ರಂಗೋಲಿ ಎಂಬುದು ಹಂಚಿ ತಿನ್ನುವ ಉದಾತ್ತ ಉದ್ದೇಶದ ಕನ್ನಡಿಯಂತಿದೆ. ಹೀಗೆ ಮಾಡುವುದರಿಂದ ಸಮಾಜಸೇವೆಯ ಜೊತೆಗೆ ಒಂದಕ್ಕೊಂದು ಕೊಂಡಿಯಾಗಿ ಗ್ರಹದೋಷಗಳೂ ದೂರವಾಗುತ್ತವೆ. ಮನೆ ಮುಂದೆ ಸ್ವಚ್ಛತೆ ಜೊತೆಗೆ ವಾತಾವರಣವನ್ನು ಆಹ್ಲಾದಕರವಾಗಿಟ್ಟುಕೊಳ್ಳಬಹುದು.
ಮಹಿಳೆಯರ ಮೆದುಳನ್ನು ಚುರುಕಾಗಿಡುವಲ್ಲಿ ಆರು ಗಣಿತ ಕೌಶಲ್ಯಗಳನ್ನು ಒಳಗೊಂಡಿದೆ. ಆ ಆರು ಯಾವುವೆಂದರೆ – ಎಣಿಕೆ, ಅಳತೆ, ವಿನ್ಯಾಸ, ಗುರುತಿಸುವಿಕೆ, ಪ್ರಯೋಗ ಮತ್ತು ವಿವರಿಸುವುದು. ಸುಂದರವಾದ ಜ್ಯಾಮಿತೀಯ ಮಾದರಿಗಳನ್ನು ರಚಿಸಲು ಚುಕ್ಕೆಗಳು, ಶೃಂಗಗಳು, ಛಾಪುಗಳು,
ಪಂಕ್ತಿಗಳು, ರೇಖೆಗಳ ಎಣಿಕೆಯನ್ನು ಇಡಬೇಕು. ಇದೆಲ್ಲವೂ ಮೆದುಳಿಗೆ ಪ್ರಚೋದಕದ ಉತ್ತಮ ವ್ಯಾಯಾಮವಾಗಿದೆ. ಸುಂದರವಾದ ರಂಗೋಲಿ ನೋಡಿದಾಗ ಅದು ನಮ್ಮ ಮನಸ್ಸನ್ನು ಆಹ್ಲಾದಕರವಾಗಿಸುತ್ತದೆ/ ಪ್ರಫುಲ್ಲಗೊಳಿಸುತ್ತದೆ. ಬೆಳಗ್ಗೆ ಏಳುವುದು ಮಹಿಳೆಯರಿಗೆ ದೈಹಿಕ ವ್ಯಾಯಾಮದ ಜೊತೆಗೆ ಮಾನಸಿಕ ವ್ಯಾಯಾಮವೂ ಆಗುತ್ತದೆ ಎಂಬುದನ್ನು ಮರೆಯಬಾರದು.
ಇನ್ನು ತ್ರಿಕೋನಗಳ ಜ್ಯಾಮಿತೀಯ ರಂಗೋಲಿ ವಿನ್ಯಾಸವು ದುಷ್ಟಶಕ್ತಿಗಳನ್ನು ಓಡಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಸಂಪತ್ತಿನ ಸಂಕೇತವಾದ ಲಕ್ಷ್ಮಿ ದೇವಿಯನ್ನು ಮನೆಗೆ ಸ್ವಾಗತಿಸುತ್ತದೆ ಎಂಬ ನಂಬಿಕೆಯಿದೆ. ರಂಗೋಲಿ ಹಾಕುವುದನ್ನು ಉತ್ತಮ ದೈಹಿಕ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ರಂಗೋಲಿ ಬಿಡಿಸಲು ದೇಹವನ್ನು ಬಗ್ಗಿಸಬೇಕು. ಈ ಅಭ್ಯಾಸವು ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಸೊಂಟಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ರಂಗೋಲಿಯಲ್ಲಿ ತ್ರಿಕೋನಗಳನ್ನು ಚಿತ್ರಿಸಲು ಹೆಚ್ಚಿನ ಗಮನ ಮತ್ತು ತಾಳ್ಮೆ ಅಗತ್ಯವಿರುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






