ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್; ಆರೋಪಿ ಬಂಧನ

ಮೇ 23, 2025 - 10:31
 0  9
ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್; ಆರೋಪಿ ಬಂಧನ

ಬಾಗಲಕೋಟೆ: ಮೋದಿಯ ಫೋಟೋವನ್ನು ಎಡಿಟ್ ಮಾಡಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 27 ವರ್ಷದ ಮೊಹಮ್ಮದ್ ಅಜೀಜ್ ರೋಣ ಬಂಧಿತ ಆರೋಪಿಯಾಗಿದ್ದು, ಮೋದಿ ಫೋಟೋ ಎಡಿಟ್ಮಾಡಿ ಅವಹೇಳನಾಕಾರಿ ಪೋಸ್ಟ್ಹಾಕಿದ್ದ ಮೊಹಮ್ಮದ್ ಕೇಸರಿ ಬಟ್ಟೆ ಧರಿಸಿದಪ್ರಧಾನಮಂತ್ರಿ ಮೋದಿ ಅವರನ್ನು ಕೈದಿಯಂತೆ ಜೈಲಿನಲ್ಲಿ ಬಂಧಿಸಿದ ರೀತಿ ಎಡಿಟ್ ಮಾಡಿದ್ದ.

ಮೋದಿಯವರ ಮುಂದೆ ಒವೈಸಿ ಪೊಲೀಸ್ ಅಧಿಕಾರಿಯ ವೇಷದಲ್ಲಿಕೂತಿರುವ ರೀತಿ ಎಡಿಟ್ ಮಾಡಿದ್ದ. ಫೋಟೋ ಎಡಿಟ್ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.

  ಫೋಟೋ ವೈರಲ್ ಆಗುತ್ತಿದ್ದಂತೆ ಮೊಹಮ್ಮದ್ಅಜಿಜ್ ಅಬ್ದುಲ್ ಸಾಬ್ ರೋಣ ವಿರುದ್ಧ ಸುಮೋಟೋ ಕೇಸ್ ಹಾಕಿ ಆರೋಪಿಯನ್ನು ಕಲಾದಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ಅಜೀಜ್ ಕಲಾದಗಿ ಪಟ್ಟಣದ ನಿವಾಸಿಯಾಗಿದ್ದಾನೆ. ಬಗ್ಗೆ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow