BBK11: ಇಂದು ಕಿಚ್ಚನ ಪಂಚಾಯಿತಿ: ಬಿಗ್ ಬಾಸ್ ಮನೆಯಿಂದ ಈ ವಾರ ಆಚೆ ಬರೋದು ಯಾರು?

ಜನವರಿ 4, 2025 - 20:00
 0  12
BBK11: ಇಂದು ಕಿಚ್ಚನ ಪಂಚಾಯಿತಿ:  ಬಿಗ್ ಬಾಸ್ ಮನೆಯಿಂದ ಈ ವಾರ ಆಚೆ ಬರೋದು ಯಾರು?

ಬಿಗ್ ಬಾಸ್ ಸೀಸನ್ 11 ಬಹಳ ಯಶಸ್ವಿಯಾಗಿ ಮೂಡಿ ಬರುತ್ತಿದ್ದು, ದಿನ ಕಳೆದಂತೆ ಸ್ಪರ್ಧಿಗಳಲ್ಲಿ ಪೈಪೋಟಿ ಜೋರಾಗಿದೆ. 

ಈಗಾಗಲೇ 96 ದಿನಗಳನ್ನು ಪೂರೈಸಿರುವ ಕನ್ನಡದ ಅತಿ ದೊಡ್ಡ ಬಿಗ್ ರಿಯಾಲಿಟಿ ಶೋ ಈಗ ಫಿನಾಲೆಗೆ ರೆಡಿಯಾಗುತ್ತಿದೆ. ಮನೆಯಲ್ಲಿ ಉಳಿದಿರೋ 9 ಸ್ಪರ್ಧಿಗಳಲ್ಲಿ ಯಾರು ಫೈನಲ್‌ ತಲುಪುತ್ತಾರೆ ಅನ್ನೋ ಲೆಕ್ಕಾಚಾರ ಈಗ ಶುರುವಾಗಿದೆ.

ಬಿಗ್ ಬಾಸ್ ಸೀಸನ್ 11ರ ಆಟ ಈಗ ಮತ್ತೊಂದು ಹಂತವನ್ನ ತಲುಪಿದೆ. ಇಷ್ಟು ದಿನ ಟಾಸ್ಕ್‌ಗಳು, ಎಲಿಮಿನೇಷನ್‌ ಟೆನ್ಷನ್‌ನಲ್ಲಿದ್ದ ಬಿಗ್ ಬಾಸ್ ವೀಕ್ಷಕರಿಗೆ ಇನ್ಮುಂದೆ ಅಸಲಿ ಮನರಂಜನೆ ಸಿಗುತ್ತಿದೆ. ಕಳೆದ ವಾರ ಫ್ಯಾಮಿಲಿ ರೌಂಡ್ಸ್ ನಡೆದಿದ್ದು, ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಮನೆಯವರ ಜೊತೆ ಮಾತನಾಡಿ ಫುಲ್ ರಿಲ್ಯಾಕ್ಸ್ ಆಗಿದ್ದಾರೆ.

ಪ್ರೀತಿ, ಸ್ನೇಹ, ಸಂಬಂಧ, ಭಾವನೆಗಳ ಬುತ್ತಿ ಬಿಚ್ಚಿದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಕಪ್ ಗೆಲ್ಲುವ ರೇಸ್ ಮತ್ತೆ ಆರಂಭವಾಗಿದೆ. ಈ ವಾರದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದು, ಉತ್ತಮ ಆಟ ಪ್ರದರ್ಶಿಸಿದ ರಜತ್ ಅವರು ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯವರ ಜೊತೆ ಕಾಲ ಕಳೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಪ್ರೀತಿ, ಪ್ರೇಮದ ಸಂದರ್ಭದಲ್ಲಿ ಕಹಿ ಬೆರೆಸಬಾರದು ಅನ್ನೋ ಕಾರಣಕ್ಕೂ ಈ ವಾರ ಯಾರನ್ನೂ ನಾಮಿನೇಟ್ ಮಾಡಲಾಗಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಸದ್ಯ ಯಾರು ನಾಮಿನೇಟ್ ಆಗಿಲ್ಲದೇ ಇರೋದ್ರಿಂದ ಈ ವಾರದ ಎಲಿಮಿನೇಷನ್ ಇರೋದು ಅನುಮಾನ ಎನ್ನಲಾಗಿದೆ. ಆದರೂ 9 ಸ್ಪರ್ಧಿಗಳಿಗೆ ಒಂದು ಡೌಟ್ ಅಂತೂ ಇದ್ದೇ ಇದೆ. ಬಿಗ್ ಬಾಸ್ ಮತ್ತೆ ಯಾರಿಗಾದ್ರೂ ಶಾಕ್ ಕೊಟ್ಟು ಹೊಸ ಟ್ವಿಸ್ಟ್ ಕೊಡಬಹುದು ಅನ್ನೋ ನಿರೀಕ್ಷೆಯೂ ಇದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow