ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಹೆಂಡತಿಯನ್ನು ಕೊಂದು ಕೊಳಕ್ಕೆ ಶವ ಎಸೆದ ಗಂಡ!

ಅಕ್ಟೋಬರ್ 5, 2025 - 21:57
 0  11
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಹೆಂಡತಿಯನ್ನು ಕೊಂದು ಕೊಳಕ್ಕೆ ಶವ ಎಸೆದ ಗಂಡ!

ಕೇರಳ: ತನ್ನ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನು ಕೊಂದು ಶವವನ್ನು ಕೊಳಕ್ಕೆ ಎಸೆದ ಆರೋಪದ ಮೇಲೆ 59 ವರ್ಷದ ಸ್ಯಾಮ್ ಜಾರ್ಜ್ ಅವರನ್ನು ಬಂಧಿಸಲಾಗಿದೆ. ಘಟನೆ  ಕೇರಳದ ಕುರವಿಲಂಗಡ ಬಳಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಜಾರ್ಜ್ ಸಂಜೆ 6 ಗಂಟೆ ಸುಮಾರಿಗೆ ಮನೆಗೆ ನುಗ್ಗಿ ಪತ್ನಿ ಜೆಸ್ಸಿ (49) ಅವರ ಕತ್ತನ್ನು ಹಿಸುಕಿ ಕೊಂದು, ಆಕೆಯ ಶವವನ್ನು ಕಾರಿನಲ್ಲಿ ಇಟ್ಟರು ಮತ್ತು ನಂತರ ಉಡುಂಬನ್ನೂರ್ ಬಳಿ ಕೊಳಕ್ಕೆ ಎಸೆದಿದ್ದಾನೆ.

ಜಾರ್ಜ್ ಕಳೆದ 15 ವರ್ಷಗಳಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜೆಸ್ಸಿ ಮೂವರು ಮಕ್ಕಳೊಂದಿಗೆ ಕೆಳಮಹಡಿಯಲ್ಲಿ ವಾಸಿಸುತ್ತಿದ್ದರು. ಮಕ್ಕಳ ವಿದೇಶ ಪ್ರಯಾಣದ ನಂತರ, ಕಳೆದ 6 ತಿಂಗಳಿನಿಂದ ಜೆಸ್ಸಿ ಒಂಟಿಯಾಗಿ ವಾಸಿಸುತ್ತಿದ್ದರು. ಜಾರ್ಜ್ ಕೂಡ ಕೆಲಸಕ್ಕಾಗಿ ವಿದೇಶದಲ್ಲಿದ್ದರು ಮತ್ತು ಕಳೆದ 6 ತಿಂಗಳಿನಿಂದ ಎಂಜಿ ವಿಶ್ವವಿದ್ಯಾಲಯದಲ್ಲಿ ಪ್ರವಾಸೋದ್ಯಮದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದರು.

ವಿದೇಶದಲ್ಲಿದ್ದ ಮಕ್ಕಳು ಎಷ್ಟೇ ಫೋನ್ ಮಾಡಿದರೂ ಸೆಪ್ಟೆಂಬರ್ 26ರಿಂದ ತಮ್ಮ ತಾಯಿಯನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಅವರು ಪೊಲೀಸರೊಂದಿಗೆ ಅವರ ಮನೆಯನ್ನು ಹುಡುಕಿದರು. ಆದರೆ ಏನೂ ಸಿಕ್ಕಿರಲಿಲ್ಲ. ಆರಂಭದಲ್ಲಿ, ನಾಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆಯ ಸಮಯದಲ್ಲಿ ಪೊಲೀಸರು ಜಾರ್ಜ್‌ನನ್ನು ಪ್ರಶ್ನಿಸಿದರು. ಆಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಆತನನ್ನು ಬಂಧಿಸಲಾಯಿತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow