I Love ಮೋದಿ ಅಂದ್ರೆ ಓಕೆ, ಐ ಲವ್ ಮೊಹಮ್ಮದ್ ಅಂದ್ರೆ ಯಾಕೆ ಕೋಪ: ಅಸಾದುದ್ದೀನ್ ಓವೈಸಿ

ಅಕ್ಟೋಬರ್ 5, 2025 - 21:10
 0  10
I Love ಮೋದಿ ಅಂದ್ರೆ ಓಕೆ, ಐ ಲವ್ ಮೊಹಮ್ಮದ್ ಅಂದ್ರೆ ಯಾಕೆ ಕೋಪ: ಅಸಾದುದ್ದೀನ್ ಓವೈಸಿ

ಹೈದರಾಬಾದ್: ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ದೇಶದಲ್ಲೀಗ ‘ಐ ಲವ್‌ ಮೊಹಮ್ಮದ್’ ವರ್ಸಸ್ ‘ಐ ಲವ್ ಮಹಾದೇವ್’ ಜಟಾಪಟಿ ಶುರುವಾಗಿದ್ದು, ಇನ್ನೂ ಈ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತನಾಡಿದ್ದಾರೆ. ಭಾರತದಲ್ಲಿ ನಾನು ಮೋದಿಯನ್ನು ಪ್ರೀತಿಸುತ್ತೇನೆ ಎಂದು ಹೇಳಬಹುದು, ಆದರೆ ನಾನು ಮೊಹಮ್ಮದ್​​ನನ್ನು ಪ್ರೀತಿಸುತ್ತೇನೆ ಎಂದು ಹೇಳುವಂತಿಲ್ಲ ಎಂದು ಹೇಳಿದ್ದಾರೆ.

ನೀವು ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಿ? ಯಾರಾದರೂ ನಾನು ಮೋದಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ ಜನರು ಸಂತೋಷ ಪಡುತ್ತಾರೆ. ಅದೇ ನಾನು ಮೊಹಮ್ಮದ್ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ ಅದಕ್ಕೆ ವಿರೋಧ ಏಕೆ ಎಂದು ಪ್ರಶ್ನಿಸಿದರು.

ಬರೇಲಿಯಲ್ಲಿ ನಡೆದ ಐ ಲವ್ ಮೊಹಮ್ಮದ್ ಪೋಸ್ಟರ್ ವಿವಾದವನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀವ್ರವಾಗಿ ಟೀಕಿಸಿದ್ದಾರೆ, ಅಲ್ಲಿ ಶಾಂತಿಯುತ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ. ದೇಶದಲ್ಲಿ ಐ ಲವ್ ಮೋದಿ ಎಂದು ಹೇಳುವುದು ಸುಲಭ, ಆದರೆ ಐ ಲವ್ ಮೊಹಮ್ಮದ್ ಎಂದು ಹೇಳುವುದು ಕಷ್ಟ ಎಂದು ಓವೈಸಿ ಹೇಳಿದರು.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಸೆಪ್ಟೆಂಬರ್ 9 ರಂದು ಕಾನ್ಪುರದಲ್ಲಿ ಬಾರಾವಾಫತ್ ಮೆರವಣಿಗೆಯ ಸಮಯದಲ್ಲಿ ಸಾರ್ವಜನಿಕ ರಸ್ತೆಯಲ್ಲಿ “ಐ ಲವ್ ಮೊಹಮ್ಮದ್” ಎಂಬ ಫಲಕವನ್ನು ಪ್ರದರ್ಶಿಸಿದ್ದಕ್ಕಾಗಿ ಎಫ್‌ಐಆರ್ ದಾಖಲಾಗುವುದರೊಂದಿಗೆ ವಿವಾದ ಪ್ರಾರಂಭವಾಯಿತು. ಮುಸ್ಲಿಂ ಸಮುದಾಯವು ಇದನ್ನು ತಮ್ಮ ನಂಬಿಕೆಯ ಸಂಕೇತವೆಂದು ಹೇಳಿತ್ತು. ಈ ಘಟನೆಯು ಉತ್ತರ ಪ್ರದೇಶದಾದ್ಯಂತ ಉದ್ವಿಗ್ನತೆಯನ್ನು ಹುಟ್ಟುಹಾಕಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow