ನಿಮಗೆ ಇಷ್ಟ ಇಲ್ಲದಿದ್ದರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಸುಪ್ರೀಂ ಗ್ರೀನ್ ಸಿಗ್ನಲ್..!

ನವದೆಹಲಿ: ಹಿರಿಯ ನಿರ್ದೇಶಕ ಮಣಿರತ್ನಂ ಮತ್ತು ನಟ ಕಮಲ್ ಹಾಸನ್ ಕಾಂಬಿನೇಷನ್ನ 'ಥಗ್ ಲೈಫ್' ಪ್ರದರ್ಶನದ ಮೇಲೆ ವಿಧಿಸಲಾಗಿರುವ "ನ್ಯಾಯಾಂಗೇತರ ನಿಷೇಧ"ವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಸಿನಿಮಾ ರಿಲೀಸ್‌ಗೆ ಅವಕಾಶ ಕೊಟ್ಟಿದೆ. ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಪಡಿಸಬೇಡಿ. ರಿಲೀಸ್ ಆಗಬೇಕು. ನಿಮಗೆ ಇಷ್ಟ ಇಲ್ಲದಿದ್ದರೆ ಸಿನಿಮಾ ನೋಡಬೇಡಿ. ತಡೆ ನಿಡೋದು, ಬೆದರಿಕೆ ಒಡ್ಡೋದು ಸರಿಯಲ್ಲ ಎಂದು ಆದೇಶ ನೀಡಿದೆ.
ರಾಜ್ಯ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು. ಜನರು ಬಂದು ಸಿನಿಮಾ ನೋಡ್ತಾರೆ. ಜನ ಬಂದು ಘೇರಾವ್ ಮಾಡ್ತೀವಿ ಅಂತ ಹೇಳಿದಾಕ್ಷಣ ಸಿನಿಮಾ ಬಿಡುಗಡೆ ನಿಲ್ಲಿಸಬಾರದು. ಜನ ಸಿನಿಮಾ ಹಾಲ್ ಸುಡುತ್ತೇವೆ ಎಂದಿದ್ದಕ್ಕೆ ಸಿನಿಮಾ ಬಿಡುಗಡೆ ನಿಲ್ಲಿಸಬಾರದು. ಈ ನೆಲದ ಕಾನೂನು ಕಾಪಾಡುವುದು ಮುಖ್ಯ ಎಂದ ಸುಪ್ರೀಂ ಕೋರ್ಟ್ ಹೇಳಿದೆ.
ಸಿಬಿಎಫ್ಸಿ ಸರ್ಟೀಫಿಕೇಟ್ ಬಳಿಕ ಸಿನಿಮಾ ಬಿಡುಗಡೆ ಮಾಡಬಹುದು. ಸಿಬಿಎಫ್ಸಿ ಸರ್ಟಿಫಿಕೇಟ್ ಸಿನಿಮಾ ಪ್ರದರ್ಶಿಸುವ ಕಾನೂನನ್ನು ದೇಶದಲ್ಲಿ ಅನುಸರಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ, ಕರ್ನಾಟಕ ಸರ್ಕಾರಕ್ಕೆ ಸಿನಿಮಾ ವಿಚಾರವಾಗಿ ನೋಟಿಸ್ ಕೂಡ ನೀಡಿದೆ. ಇನ್ನು ಹೈಕೋರ್ಟ್ನಲ್ಲಿ ಸಿನಿಮಾ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್, ಟ್ರಾನ್ಸ್ಫರ್ ಮಾಡಿಕೊಂಡಿದೆ. ಹೀಗಾಗಿ ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಬೇಕಿದ್ದ ಮುಂದಿನ ಎಲ್ಲಾ ವಿಚಾರಣೆಗಳು ಸುಪ್ರೀಂ ಕೋರ್ಟ್ನಲ್ಲಿಯೇ ನಡೆಯಲಿವೆ.
ನಿಮ್ಮ ಪ್ರತಿಕ್ರಿಯೆ ಏನು?






