ಪ್ರಭಾಸ್–ಹೊಂಬಾಳೆ ಫಿಲಮ್ಸ್ ಮಧ್ಯೆ ಬಂಪರ್ ಡೀಲ್: ಒಂದೇ ಬಾರಿಗೆ ಮೂವರು ಸಿನಿಮಾಗೆ ಒಪ್ಪಂದ!

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಇದೀಗ ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆಯೊಟ್ಟಿಗೆ ಮೂರು ದೊಡ್ಡ ಸಿನಿಮಾಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಾಲಿವುಡ್ನ ದೊಡ್ಡ ನಿರ್ಮಾಪಕರು ಪ್ರಭಾಸ್ ಜೊತೆ ಕೆಲಸ ಮಾಡಲು ಸಾಲುಗಟ್ಟಿದ್ದರೂ, ಪ್ರಭಾಸ್ ತಮ್ಮ ಕೆಲಸದ ಆಯ್ಕೆಯಲ್ಲಿ ನಿರ್ದಿಷ್ಟತೆಯನ್ನು ಪಾಲಿಸುತ್ತಿದ್ದಾರೆ. ಅವರು ಪಾತ್ರ, ಕತೆ ಹಾಗೂ ಬ್ಯಾನರ್ ಬಗ್ಗೆ ಅಳೆದು ತೂಗಿ ನಿರ್ಧಾರ ಕೈಗೊಳ್ಳುತ್ತಾರೆ.
ಹೊಂಬಾಳೆ ಫಿಲಮ್ಸ್ನೊಂದಿಗೆ ತಾವು ಒಟ್ಟಿಗೆ ಮೂರು ಸಿನಿಮಾಗೆ ಸಹಿ ಹಾಕಿರುವುದಾಗಿ ಸ್ವತಃ ಪ್ರಭಾಸ್ ಬಹಿರಂಗಪಡಿಸಿದ್ದಾರೆ. ನಿರ್ದೇಶಕ ಹಾಗೂ ಕಥೆಯ ಬಗ್ಗೆ ನಿರ್ಧಾರವಾಗಿಲ್ಲದಿದ್ದರೂ, ಈ ಮೂರು ಚಿತ್ರಗಳು ಮುಂದಿನ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಬಿಡುಗಡೆಯಾಗಲಿವೆ.
ಇದರ ಹಿಂದೆ ದೊಡ್ಡ ಕಾರಣವಿದ್ದೇ ಇದೆ. ನಿರ್ಮಾಪಕ ವಿಜಯ್ ಕಿರಗಂದೂರು ಬಗ್ಗೆ ಪ್ರಭಾಸ್ ಹೆಸರಿಸಿ ಮಾತನಾಡಿದ್ದಾರೆ. "ವಿಜಯ್ ಅವರ ನಡತೆ, ಅವರ ಸರಳತೆಯೇ ನನಗೆ ಹೆಚ್ಚು ಇಷ್ಟವಾಯಿತು. ಅವರು ತಮ್ಮ ಸಿನಿಮಾದ ತಂಡದ ಸದಸ್ಯರ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಾರೆ. ಮನೆಯಂತಹ ಬಾಂಧವ್ಯವಿದೆ. ಅವರು ನನ್ನಂತೆಯೇ ಹೊರಗೆ ಹೋಗುವುದು ಇಷ್ಟಪಡುವುದಿಲ್ಲ. ಇದು ನಮ್ಮಿಬ್ಬರ ಮಧ್ಯೆ ನ್ಯಾಚುರಲ್ ಕನೆಕ್ಷನ್ ತಂದಿತು" ಎಂದು ಹೇಳಿದ್ದಾರೆ ಪ್ರಭಾಸ್.
ಪ್ರಭಾಸ್ ಈಗಾಗಲೇ ಹೊಂಬಾಳೆ ನಿರ್ಮಾಪನೆಯ 'ಸಲಾರ್' ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ 'ಸಲಾರ್ 2' ಸೇರಿದಂತೆ ಇನ್ನೂ ಎರಡು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಪ್ರಪ್ರಶಾಂತ್ ವರ್ಮಾ ನಿರ್ದೇಶನದ ಒಂದು ಸಿನಿಮಾವನ್ನು ಹೊಂಬಾಳೆ ನಿರ್ಮಿಸುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






