8 ಮದುವೆ, ಲಕ್ಷ ಲಕ್ಷ ವಂಚನೆ: ಇನ್ನೇನು 9ನೇ ಮದುವೆ ಆಗಬೇಕು ಅನ್ನುವಷ್ಟರಲ್ಲೇ ಸಿಕ್ಕಿಬಿದ್ಳು ಕಿಲಾಡಿ ಲೇಡಿ.!

ನಾಗ್ಪುರ: ಮದುವೆಯ ಹೆಸರಿನಲ್ಲಿ ಗಂಡಸರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಗ್ಪುರದ 35 ವರ್ಷದ ಸಮೀರಾ ಫಾತಿಮಾ ಎಂಬ ಮಹಿಳೆ ಬರೋಬ್ಬರಿ 8 ಬಾರಿ ಮದುವೆಯಾಗಿದ್ದು, ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದಾಳೆ. ಇದೀಗ 9ನೇ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಅದ್ಭುತ ನಟನೆಯ ಕಳ್ಳತನ
ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿರುವ ಸಮೀರಾ ಫಾತಿಮಾ ಮ್ಯಾಟ್ರಿಮೊನಿ ವೆಬ್ಸೈಟ್ಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಲಿಂ ಸಮುದಾಯದ ಪುರುಷರನ್ನು ಗುರಿಯಾಗಿಸಿಕೊಂಡು, ತಾನು ವಿಧವೆ ಎಂದು ತಪ್ಪು ಮಾಹಿತಿ ನೀಡಿ ಅವರ ಭಾವನೆಗಳನ್ನು ಬಳಸಿಕೊಂಡು ಮದುವೆಯಾಗುತ್ತಿದ್ದಳು. ಬಳಿಕ ಗಂಡನಿಗೆ ಕಿರುಕುಳ ನೀಡಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ, ಅದನ್ನು ಎಡಿಟ್ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದಳು.
ಹಣಕ್ಕಾಗಿ ಬ್ಲಾಕ್ಮೇಲ್ ಹಾಗೂ ನಕಲಿ ಪ್ರಕರಣ
ಮದುವೆಯ ನಂತರ ಆಕೆಯ ಗಂಡನ ವಿರುದ್ಧ ವ್ಯಭಿಚಾರ ಅಥವಾ ಕಿರುಕುಳದ ಆರೋಪದ ನಕಲಿ ಪ್ರಕರಣ ದಾಖಲು ಮಾಡುತ್ತಿದ್ದು, ಬಳಿಕ ಆ ಪ್ರಕರಣ ಹಿಂಪಡೆಯಲು ಲಕ್ಷಾಂತರ ರೂ. ಹಣ ಕೇಳುತ್ತಿದ್ದಳು. 2022ರಲ್ಲಿ ಫಾತಿಮಾಳನ್ನು ಮದುವೆಯಾದ ಗುಲಾಮ್ ಪಠಾಣ್ ಎಂಬವರು, 2024ರಲ್ಲಿ ಆಕೆಯ ವಿರುದ್ಧ ದೂರು ನೀಡಿದ್ದು,
ತನ್ನಿಂದ 10 ಲಕ್ಷ ರೂ. ಚೆಕ್ ವಸೂಲಿ ಮಾಡಿದ ಬಗ್ಗೆ ಆರೋಪಿಸಿದ್ದರು. ಆ ದೂರಿನ ಆಧಾರದ ಮೇಲೆ ಪೊಲೀಸರು ಸಮೀರಾರನ್ನು ನಾಗ್ಪುರದ ಸಿವಿಲ್ ಲೈನ್ಸ್ ಪ್ರದೇಶದ ಡಾಲಿ ಕಿ ಟ್ಯಾಪ್ರಿಯಿಂದ ಜುಲೈ 29ರಂದು ಬಂಧಿಸಿದರು. ಬಂಧನದಿಂದ ತಪ್ಪಿಸಿಕೊಳ್ಳಲು ತಾನು ಗರ್ಭಿಣಿ ಎಂದು ಸುಳ್ಳು ಹೇಳಿದ್ದರೂ ಕೊನೆಗೂ ಅವಳು ಅರೆಸ್ಟ್ ಆಗಿದ್ದಾಳೆ.
ಪೊಲೀಸರು ತನಿಖೆ ಮುಂದುವರೆಸಿದಾಗ, ಸಮೀರಾ ಫಾತಿಮಾ ಇನ್ನೂ ಏಳು ಪುರುಷರನ್ನು ಇದೇ ರೀತಿಯಲ್ಲಿ ಮದುವೆಯಾಗಿ ಮೋಸ ಮಾಡಿದ ವಿಚಾರ ತಿಳಿದುಬಂದಿದೆ. ಸದ್ಯದಲ್ಲೇ 9ನೇ ಮದುವೆಗೋಸುಗೆಯಲ್ಲಿದ್ದ ಈ ಮಹಿಳೆಯ ಮೋಸದ ಜಾಲ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






