Actor Darshan: ಜಾಮೀನು ಟೆನ್ಷನ್’ನಲ್ಲಿ ಥಾಯ್ಲೆಂಡ್ನಿಂದ ವಾಪಸಾದ ದರ್ಶನ್!

ಜುಲೈ 26, 2025 - 10:57
 0  18
Actor Darshan: ಜಾಮೀನು ಟೆನ್ಷನ್’ನಲ್ಲಿ ಥಾಯ್ಲೆಂಡ್ನಿಂದ ವಾಪಸಾದ ದರ್ಶನ್!

ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ನಿನ್ನೆ ರಾತ್ರಿ ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದರು.

ದರ್ಶನ್ ಅವರು ರಾತ್ರಿ 11:45ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ತಲುಪಿದರು. ವಿಮಾನ ನಿಲ್ದಾಣದಿಂದ ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ತಮ್ಮ ನಿವಾಸದತ್ತ ಪ್ರಯಾಣ ಬೆಳೆಸಿದರು.

ದೇವನಹಳ್ಳಿ ಬಳಿ ಇರುವ ಕೆಐಎಬಿ ವಿಮಾನ ನಿಲ್ದಾಣದಲ್ಲಿ ಯಾವುದೇ ಘರ್ಷಣೆ ಅಥವಾ ಭದ್ರತಾ ಸಮಸ್ಯೆ ವರದಿಯಾಗಿಲ್ಲ. ನಟ ದರ್ಶನ್ ವಿರುದ್ಧದ ಪ್ರಕರಣ ಇನ್ನೂ ತನಿಖೆಯಲ್ಲಿದ್ದು, ಅವರ ಇತ್ತೀಚಿನ ಚಲನವಲನಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow