ಬೆಂಗಳೂರಿನಲ್ಲಿ ಗನ್ ಹಿಡಿದು ಮುಸುಕುಧಾರಿಗಳಿಂದ ಚಿನ್ನದಂಗಡಿ ರಾಬರಿ!

ಬೆಂಗಳೂರು:- ಅಂಗಡಿ ಕ್ಲೋಸ್ ಮಾಡುವ ಹೊತ್ತಲ್ಲಿ ಖದೀಮರು ಗನ್ ಹಿಡಿದು ಚಿನ್ನದಂಗಡಿ ರಾಬರಿ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿ ಗೇಟ್ ನ ರಾಮ್ ಜ್ಯುವೆಲರ್ಸ್ ನಲ್ಲಿ ಜರುಗಿದೆ.
ಮೊನ್ನೆ ರಾತ್ರಿ 8.30ರ ಸುಮಾರಿಗೆ ಮೂವರು ಮುಸುಕಾರಿಗಳಿಂದ ಕೃತ್ಯ ನಡೆದಿದೆ. ಜ್ಯುವೆಲ್ಲರಿ ಮಾಲೀಕ ಕನ್ನಯ್ಯಲಾಲ್ ಶಾಪ್ ಕ್ಲೋಸ್ ಮಾಡಲು ಮುಂದಾಗಿದ್ರು. ಈ ವೇಳೆ ಶಾಪ್ ಗೆ ಗನ್ ಹಿಡಿದು ಮೂವರು ಎಂಟ್ರಿ ಕೊಟ್ಟಿದ್ದಾರೆ. ಗನ್ ಹಿಡಿದು ಹೆದರಿಸಿ ಟೇಬಲ್ ಮೇಲಿದ್ದ ಚಿನ್ನವನ್ನ ಬಾಚಿಕೊಂಡ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ. ಮಾಲೀಕ ಕನ್ನಯ್ಯಲಾಲ್ ಕೂಗಾಡಿದ್ರು ಕನ್ನಯ್ಯಲಾಲ್ ಮತ್ತು ಸಿಬ್ಬಂದಿಯನ್ನ ತಳ್ಳಿ ಚಿನ್ನಾಭರಣ ದರೋಡೆ ಮಾಡಿದ್ದಾರೆ.
ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು ಆತನನ್ನ ತಳ್ಳಿ ಎಸ್ಕೇಪ್ ಆಗಿದ್ದಾರೆ. ಕೈಗೆ ಸಿಕ್ಕ ಚಿನ್ನವನ್ನ ದೋಚಿ ಮೂವರು ದರೋಡೆಕೋರರು ಎಸ್ಕೇಪ್ ಆಗಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?






