Chess World Cup: ಕೊನೆರು ಹಂಪಿಗೆ ಸೋಲು: 19 ವರ್ಷದ ಯುವತಿಯಿಂದ ಭಾರತಕ್ಕೆ ಚೊಚ್ಚಲ ವಿಶ್ವಕಿರೀಟ..!

ಜುಲೈ 28, 2025 - 20:00
 0  12
Chess World Cup: ಕೊನೆರು ಹಂಪಿಗೆ ಸೋಲು: 19 ವರ್ಷದ ಯುವತಿಯಿಂದ ಭಾರತಕ್ಕೆ ಚೊಚ್ಚಲ ವಿಶ್ವಕಿರೀಟ..!

ಜಾರ್ಜಿಯಾ: ಭಾರತದ 19 ವರ್ಷದ ಯುವ ಚೆಸ್ ತಾರೆ ದಿವ್ಯಾ ದೇಶಮುಖ್ 2025 ಫಿಡೆ ಮಹಿಳಾ ಚೆಸ್ ವಿಶ್ವಕಪ್ನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಜಾರ್ಜಿಯಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಭಾರತದ ಲೆಜೆಂಡರಿ ಚೆಸ್ ಆಟಗಾರ್ತಿ ಕೊನೆರು ಹಂಪಿ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದೊಂದು ಐತಿಹಾಸಿಕ ಸಾಧನೆಯಾಗಿದ್ದು, ದಿವ್ಯಾ ದೇಶಮುಖ್ ಚೆಸ್ ವಿಶ್ವಕಪ್ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನೂ ಕಳೆದ ವರ್ಷವೇ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದ ದಿವ್ಯಾ, ಬಾರಿ ವಿಶ್ವಕಪ್ ಗೆಲುವು ಮೂಲಕ ತನ್ನ ಶ್ರೇಯಸ್ಸನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಜಯದೊಂದಿಗೆ ಅವರು ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್ಮಾಸ್ಟರ್ ಎಂಬ ಗೌರವವನ್ನು ಸಂಪಾದಿಸಿದ್ದಾರೆ.

ದಿವ್ಯಾ ದೇಶಮುಖ್ ಸಾಧನೆಯ ಮೂಲಕ ಭಾರತದ ಚೆಸ್ ಕ್ಷೇತ್ರದಲ್ಲಿ ಹೊಸ ಸ್ಫೂರ್ತಿಯನ್ನುಂಟುಮಾಡಿದ್ದು, ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿ ಪರಿಣಮಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow