ಹೀರೋ, ಹೀರೋ ಎನ್ನುತ್ತಲೇ ದರ್ಶನ್ ಹಾಡಿಗೆ ಸೊಂಟ ಬಳುಕಿಸಿದ ಸೋನು: ಸೂಪರ್ ಎಂದ ಫ್ಯಾನ್ಸ್!

ಸೋನುಗೌಡ. ಈ ಹೆಸರು ಯಾರಿಗ್ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ ಬೆಡಗಿ.. ಎಸ್ ಸೋನು ಸೊಂಟ ಬಳುಕಿಸುತ್ತಿರುವ ಒಂದು ವಿಡಿಯೋ ಭಾರೀ ವೈರಲ್ ಆಗಿದೆ.
ಎಸ್, ರೀಲ್ಸ್ ಲೋಕದ ರೀಲ್ಸ್ ರಾಣಿ ಸೋನು ಗೌಡ ಸಖತ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ಗಾಗಿ ಆಯ್ಕೆ ಮಾಡಿಕೊಂಡ ಹಾಡು ಕೂಡ ಸೂಪರ್ ನೋಡಿ. ದಾಸ ದರ್ಶನ್ ಅಭಿನಯದ ಕಲಾಸಿಪಾಳ್ಯ ಚಿತ್ರದ ಹಾಡನ್ನೆ ಸೆಲೆಕ್ಟೆಮಾಡಿದ್ದಾರೆ. ರಕ್ಷಿತಾ ಪ್ರೇಮ್ ಮತ್ತು ದರ್ಶನ್ ಈ ಒಂದು ಹಾಡಿನಲ್ಲಿ ಜಿದ್ದಿಗೆ ಬಿದ್ದವರ ಹಾಗೆ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ಮ್ಯಾಚ್ ಮಾಡೋಕೆ ಯಾರಿಗೂ ಆಗೋದಿಲ್ಲ ಬಿಡಿ. ಆದರೆ, ರೀಲ್ಸ್ ರಾಣಿ ಸೋನು ಗೌಡ ಆ ಸಾಹಸವನ್ನ ಮಾಡಿದ್ದಾರೆ.
ಬಹುಶಃ ಫಸ್ಟ್ ಟೈಮ್ ಅನಿಸುತ್ತದೆ. ಈ ರೀಲ್ಸ್‌ಗೆ ಒಳ್ಳೆ ಒಳ್ಳೆ ಕಾಮೆಂಟ್ಸ್ ಬಂದಿವೆ. ಸೋನು ಡ್ಯಾನ್ಸ್ ಮಾಡಿರೋ ರೀತಿಗೂ ಇಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಸುತ್ತ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸೋನು ಗೌಡ ಬೋಲ್ಡ್ ಡ್ರೆಸ್ ತೊಟ್ಟು ಟ್ರೋಲ್ ಆಗುತ್ತಾರೆ. ಪೆದ್ದುಪೆದ್ದಾಗಿಯೇ ರೀಲ್ಸ್ ಮಾಡಿ ಟ್ರೋಲ್ ಆಗೋದು ಇದೆ. ಆದರೆ, ಬಹುಶಃ ಫಸ್ಟ್ ಟೈಮ್ ಅನಿಸುತ್ತದೆ. ಸೋನು ಗೌಡ ಟ್ರೋಲ್ ಆಗಿಲ್ಲ. ಬದಲಾಗಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸೋಷಿಲ್ ಮೀಡಿಯಾದಲ್ಲಿ ಸೋನು ರೀಲ್ಸ್ ನೋಡಿದವ್ರು ಮೆಚ್ಚಿಕೊಂಡಿದ್ದಾರೆ.
ದಾಸ ದರ್ಶನ್ ಹಾಡಿಗೆ ಸೋನು ಗೌಡ ರೀಲ್ಸ್ ಮಾಡಿದ್ದಾರೆ. ತುಂಬಾನೆ ಚೆಂದ ಅನಿಸೋ ಎಕ್ಸಪ್ರೆಷನ್ ಕೊಡೋ ಕೆಲಸ ಕೂಡ ಮಾಡಿದ್ದಾರೆ. ಇದನ್ನ ನೋಡಿದ್ರು ಸೂಪರ್ ಕ್ಯೂಟ್ ಅಂತಲೂ ಕಾಮೆಂಟ್ ಬಾಕ್ಸ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲಾಸಿಪಾಳ್ಯ ಚಿತ್ರದ ಹಾಡಿಗೆ ರೀಲ್ಸ್
ಕಲಾಸಿಪಾಳ್ಯ ಚಿತ್ರದಲ್ಲಿ ಓ ಕೆಂಚ ಅನ್ನೋ ಹಾಡಿದೆ. ಇದೇ ಹಾಡಿಗೇನೆ ಸೋನು ಗೌಡ ರೀಲ್ಸ್ ಮಾಡಿದ್ದಾರೆ. ಆದರೆ, ಇಡೀ ಹಾಡಿಗೆ ಇಲ್ಲಿ ರೀಲ್ಸ್ ಏನೂ ಮಾಡಿಲ್ಲ. ಬದಲಾಗಿ, ಈ ಹಾಡಿನಲ್ಲಿ ಬರೋ ಹೀರೋ ಹೀರೋ ಅನ್ನೋ ಸಾಲಿಗೇನೆ ರೀಲ್ಸ್ ಮಾಡಿದ್ದಾರೆ.
ಸೋನು ಗೌಡ ರೀಲ್ಸ್ ಮಾಡ್ತಾನೇ ಇರ್ತಾರೆ. ಹೊಸ ರೀತಿಯ ರೀಲ್ಸ್ ಮಾಡೋದು ಇದೆ. ಹಾಗೆ ಸಿನಿಮಾ ಹಾಡುಗಳಿಗೂ ಕುಣಿಯೋದು ಇದೆ. ಈ ಎಲ್ಲ ರೀಲ್ಸ್‌ಗಳಲ್ಲಿ ಕಲಾಸಿಪಾಳ್ಯ ಹಾಡಿನ ರೀಲ್ಸ್ ಮಜವಾಗಿದೆ. ಇದಕ್ಕಾಗಿ ಹೆಚ್ಚು ಅಭ್ಯಾಸ ಮಾಡಿದಂತೆನೂ ಇದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






