Hansika Motwani: ಬಿಂದಾಸ್ ನಟಿ ದಾಂಪತ್ಯದಲ್ಲಿ ಬಿರುಕು: ಹನ್ಸಿಕಾ ಮೋಟ್ವಾನಿ ಪತಿ ಕೊಟ್ರು ಸ್ಪಷ್ಟನೆ

ಜುಲೈ 21, 2025 - 20:02
 0  17
Hansika Motwani: ಬಿಂದಾಸ್ ನಟಿ ದಾಂಪತ್ಯದಲ್ಲಿ ಬಿರುಕು: ಹನ್ಸಿಕಾ ಮೋಟ್ವಾನಿ ಪತಿ ಕೊಟ್ರು ಸ್ಪಷ್ಟನೆ

ನಟಿ ಹನ್ಸಿಕಾ ಮೋಟ್ವಾನಿ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಪತಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಅವರು ಎರಡು ವರ್ಷಗಳ ಹಿಂದೆ ಉದ್ಯಮಿ ಸೊಹೈಲ್ ಕಥುರಿಯಾ ಅವರನ್ನು ವಿವಾಹವಾದರು ಎಂದು ತಿಳಿದುಬಂದಿದೆ. ಇತ್ತೀಚೆಗೆ, ಅವರ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿವೆ.. ಮತ್ತು ಕ್ರಮದಲ್ಲಿ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ. ಇಬ್ಬರೂ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ವರದಿಗಳಿವೆ.

ಹನ್ಸಿಕಾ ಮೋಟ್ವಾನಿ ಅವರು ಡಿಸೆಂಬರ್ 2022ರಲ್ಲಿ ವಿವಾಹ ಆದರು. ಇವರು ಮದುವೆ ಆದ ಬಳಿಕ ಹಲವು ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಈಗ ಹನ್ಸಿಕಾ ಹಾಗೂ ಸೊಹೈಲ್ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಪರಿಣಾಮ ಹನ್ಸಿಕಾ ಅವರು ತಾಯಿ ಮನೆಗೆ ಶಿಫ್ಟ್ ಆಗಿದ್ದಾರಂತೆ. ಅಂದರೆ ಇಬ್ಬರೂ ಬೇರೆ ಆಗಿ ವಾಸ ಮಾಡುತ್ತಿರುವುದು ಮೂಲಗಳಿಂದ ಸ್ಪಷ್ಟವಾಗಿದೆ ಎಂದೇ ಹೇಳಬಹುದು.

ಬಗ್ಗೆ ಸೊಹೈಲ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇದು ಸತ್ಯ ಅಲ್ಲಎಂದು ಹೇಳಿದ್ದಾರೆ. ಆದರೆ, ಮುಂದೆ ಏನನ್ನೂ ಹೇಳಿಲ್ಲ. ವಿಚಾರ ಸದ್ಯ ಚರ್ಚೆಯ ಕೇಂದ್ರ ಬಿಂದು ಆಗಿದೆ. ಅದ್ದೂರಿ ವಿವಾಹ ಇವರು ರೀತಿ ಬೇರೆ ಆಗುತ್ತಿದ್ದಾರೆ ಎಂಬ ವಿಚಾರ ತಿಳಿದು ಫ್ಯಾನ್ಸ್ ಬೇಸರಗೊಂಡಿದ್ದಾರೆ. ಜೈಪುರದಲ್ಲಿ ಹನ್ಸಿಕಾ ಹಾಗೂ ಸೊಹೈಲ್ ಅವರು ವಿವಾಹ ಆದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತು. ಈಗ ಇವರು ಬೇರೆ ಆಗುತ್ತಿರುವುದು ಸಾಕಷ್ಟು ಶಾಕಿಂಗ್ ಎನಿಸಿದೆ.

ಸೊಹೈಲ್ಗೆ ಇದು ಮೊದಲ ಮದುವೆ ಅಲ್ಲವೇ ಅಲ್ಲ. ಮೊದಲು ಅವರು ರಿಂಕಿ ಎಂಬುವವರನ್ನು ಮದುವೆ ಆಗಿದ್ದರು. ನಂತರ ವಿಚ್ಛೇದನ ಆಯಿತು. ಹೀಗಾಗಿ, ಹನ್ಸಿಕಾ ಪತ್ನಿ ಬಿಟ್ಟವನನ್ನು ಮದುವೆ ಆಗುತ್ತಿದ್ದಾರೆ ಎಂದಾಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ವಿಚಿತ್ರ ಎಂದರೆ ಹನ್ಸಿಕಾ ಅವರು ರಿಂಕಿಯ ಗೆಳತಿಯೇ ಆಗಿದ್ದರು. ಈಗ ಇವರ ಸಂಬಂಧ ಕೂಡ ಕೊನೆ ಆಗುತ್ತಾ ಇದೆ ಅನ್ನೋದು ವಿಶೇಷ. ಹನ್ಸಿಕಾ ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಇದ್ದಾರೆ. ಅವರು ಪುನೀತ್ ಜೊತೆಬಿಂದಾಸ್ಸಿನಿಮಾದಲ್ಲಿ ನಟಿಸಿದ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow