ಖ್ಯಾತ ನಟಿ ಮದುವೆ ಆಗಲಿದ್ದಾರೆ ತಮಿಳು ನಟ ವಿಶಾಲ್.. ಯಾರು ಆ ಸುಂದರಿ?

ಮೇ 20, 2025 - 20:02
 0  9
ಖ್ಯಾತ ನಟಿ ಮದುವೆ ಆಗಲಿದ್ದಾರೆ ತಮಿಳು ನಟ ವಿಶಾಲ್.. ಯಾರು ಆ ಸುಂದರಿ?

ತಮಿಳಿನ ಖ್ಯಾತ ನಟ ವಿಶಾಲ್ ಅವರು ತಮ್ಮ 47ನೇ ವಯಸ್ಸಿಗೆ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಸುದ್ದಿ ಮಾಡುತ್ತಿದೆ. ಹಾಗಿದ್ರೆ ಇದು ನಿಜಾನಾ!? ಯಾರು ಆ ಬೆಡಗಿ ಎಂಬೆಲ್ಲಾ ನಿಮ್ಮ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿ ಓದಿ. 

ನಟ ವಿಶಾಲ್ ಮತ್ತು ನಟಿ ಸಾಯಿ ಧನ್ಶಿಕಾ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸ್ನೇಹದಿಂದ ಆರಂಭವಾದ ಅವರ ನಂಟು ಪ್ರೀತಿಯಾಗಿ ಬದಲಾಗಿತ್ತು ಎಂದು ವರದಿಯಾಗಿದೆ

ನಡಿಗರ್ ಸಂಘದ  ಭಾಗವಾಗಿರುವ ವಿಶಾಲ್, 9 ವರ್ಷಗಳ ಹಿಂದೆ ನಿಧಿ ಸಂಗ್ರಹಿಸಿ ನಡಿಗರ್ ಸಂಘದ ಕಟ್ಟಡ ನಿರ್ಮಾಣ ಪೂರ್ಣ ಆದ್ಮೇಲೆ ಮದುವೆ ಆಗೋದಾಗಿ ಘೋಷಿಸಿದ್ದರು. ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ, ನಡಿಗರ್ ಸಂಘದ ಕಟ್ಟಡವು ಈಗ ಪೂರ್ಣಗೊಳ್ಳುತ್ತಿದೆ. ನಿಮ್ಮ ಮದುವೆಯ ಕತೆ ಏನು? ಎಂಬ ಪ್ರಶ್ನೆ ಕೇಳಲಾಗಿತ್ತು.

ಈ ಪ್ರಶ್ನೆಗೆ ವಿಶಾಲ್, ಹೌದು, ನನ್ನ ಸಂಗಾತಿಯನ್ನು ನಾನು ಹುಡುಕಿಕೊಂಡಿದ್ದೇನೆ. ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದೇವೆ. ವಧುವಿನ ವಿವರಗಳು ಮತ್ತು ವಿವಾಹದ ದಿನಾಂಕದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದಿದ್ದರು.

ವಿಶಾಲ್ ಶೀಘ್ರದಲ್ಲೇ ಮದುವೆ ಸುದ್ದಿ ಘೋಷಿಸುವುದಾಗಿ ಹೇಳಿದ್ದರಿಂದ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸಾಯಿ ಧನ್ಶಿಕಾ ಅಥವಾ ವಿಶಾಲ್‌ರಿಂದ ಅವರಿಬ್ಬರ ವಿವಾಹದ ಯಾವುದೇ ಅಧಿಕೃತ ಸುದ್ದಿ ಇನ್ನೂ ಬಂದಿಲ್ಲ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow