ಭೀಮಾತೀರದ ನಟೋರಿಯಸ್ ಹಂತಕ ಭಾಗಪ್ಪ ಹರಿಜನ ಹತ್ಯೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು!

ಫೆಬ್ರವರಿ 14, 2025 - 12:01
 0  72
ಭೀಮಾತೀರದ ನಟೋರಿಯಸ್ ಹಂತಕ ಭಾಗಪ್ಪ ಹರಿಜನ ಹತ್ಯೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು!

ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿತ್ತು. ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ಗಾಂಧಿಚೌಕ ಠಾಣೆ ಪೊಲೀಸರು ಕೇವಲ 24 ಗಂಟೆಯಲ್ಲಿ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪ್ರಕಾಶ ಅಲಿಯಾಸ್​ ಪಿಂಟ್ಯಾ ಅಗರಖೇಡ್ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಎ1 ಪ್ರಕಾಶ್​ ಅಲಿಯಾಸ್​ ಪಿಂಟ್ಯಾ ಅಗರಖೇಡ್ (25), ಎ2 ರಾಹುಲ್ ತಳಕೇರಿ (20), ಎ3 ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), ಎ4 ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳು ಎಂದು ಎಸ್​ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಬಂಧಿತರೆಲ್ಲರು ಗೆಳೆಯರು ಎಂದು ತಿಳಿದುಬಂದಿದೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ್ ಮಾರಿಹಾಳ, ಎಎಸ್ಪಿ ಹಟ್ಟಿ, ಡಿವೈಎಸ್​ಪಿ ಬಸವರಾಜ್ ಎಲಿಗಾರ್, ಸಿಪಿಐ ಪ್ರದೀಪ್ ತಳಕೇರಿ, ಪಿಎಸ್‌ಐ ರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಫೆಬ್ರವರಿ 11 ರಾತ್ರಿ 9:45 ಸುಮಾರಿಗೆ ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಕೊಲೆ ಮಾಡಲಾಗಿತ್ತು. ಆಟೋದಲ್ಲಿ ಬಂದಿದ್ದ ನಾಲ್ಕೈದು ಮಂದಿ, ಪಕ್ಕಾ ಪ್ಲ್ಯಾನ್ ಮಾಡಿ ಮಾರಕಾಸ್ತ್ರಗಳಿಂದ ಬಾಗಪ್ಪನ ತಲೆ, ಕೈಗೆ ಹಲ್ಲೆಗೈದು, ಎಡಗೈ ಮತ್ತು ಮುಂಗೈ ಕತ್ತರಿಸಿ ಮತ್ತು ಗುಂಡು ಹಾರಿಸಿ ಸಂಬಂಧಿಕರ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಊಟ ಮಾಡಿ ವಾಕ್ ಮಾಡುತ್ತಿದ್ದಾಗಗಲೇ ಬಾಗಪ್ಪನನ್ನು ಕೊಲೆಗೈದು ಪರಾರಿಯಾಗಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow