ಉಗ್ರರ ಅಟ್ಟಹಾಸಕ್ಕೆ ಹನಿಮೂನ್’ಗಾಗಿ ಪಹಲ್ಗಾಮ್’ಗೆ ಬಂದಿದ್ದ ನೌಕಾಪಡೆ ಅಧಿಕಾರಿ ಬಲಿ..!

ಎಪ್ರಿಲ್ 23, 2025 - 09:38
 0  13
ಉಗ್ರರ ಅಟ್ಟಹಾಸಕ್ಕೆ ಹನಿಮೂನ್’ಗಾಗಿ ಪಹಲ್ಗಾಮ್’ಗೆ ಬಂದಿದ್ದ ನೌಕಾಪಡೆ ಅಧಿಕಾರಿ ಬಲಿ..!

ಹನಿಮೂನ್​ಗೆಂದು ಬಂದಿದ್ದ ನವಜೋಡಿಗಳಿಗೆ ಈ ದಿನ ಕರಾಳ ದಿನವಾಗಿ ಮಾರ್ಪಟ್ಟಿದೆ. ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ ಕಣಿವೆಯಲ್ಲಿಉಗ್ರರ ಗುಂಡಿನ ದಾಳಿ ನಡೆದಿದ್ದು, 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.   ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ 30ಕ್ಕೂ ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ.

ಇನ್ನು ಉಗ್ರರ ಗುಂಡಿನ ದಾಳಿಗೆ ವಾರದ ಹಿಂದೆಯಷ್ಟೇ ಬಲಿಯಾಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ.  ಲೆಫ್ಟಿನೆಂಟ್ ವಿನಯ್ ನರ್ವಾಲ್ (26) ದಾಳಿಯಲ್ಲಿ ಮೃತಪಟ್ಟ ಅಧಿಕಾರಿ. ಹರಿಯಾಣ ಮೂಲದ ನರ್ವಾಲ್‌ ಇದೇ ಏಪ್ರಿಲ್‌ 16ರಂದು ಮದುವೆಯಾಗಿದ್ದರು. ಕೊಚ್ಚಿಯಲ್ಲಿ ಹೊಸದಾಗಿ ನೇಮಕಗೊಂಡಿದ್ದ ನೌಕಾಪಡೆಯ ನರ್ವಾಲ್‌ ರಜೆಯ ಮೇಲೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಲ್ಲಿರುವಾಗಲೇ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

 ಗುಪ್ತಚರ ಇಲಾಖೆ ಅಧಿಕಾರಿ ಸಾವು: ಅಲ್ಲದೇ ಉಗ್ರರ ದಾಳಿಗೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಬಿಹಾರ ಮೂಲದ ರಂಜನ್ ಅವರು ತಮ್ಮ ಪತ್ನಿ, ಮಗು ಕಣ್ಣಮುಂದೆಯೇ ಗುಂಡಿಗೆ ಬಲಿಯಾಘಿದ್ದಾರೆ. ಬಿಹಾರ ಮೂಲದ ಮನೀಶ್‌ ರಂಜನ್‌ ತೆಲಂಗಾಣ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಲಸಕ್ಕೆ ರಜೆ ಹಾಕಿ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಕುಟುಂಬದೊಂದಿಗೆ ಸಂತಸದಿಂದ ಕಾಲ ಕಳೆಯುವಾಗಲೇ ರಕ್ಕಸರ ದಾಳಿಗೆ ಬಲಿಯಾಗಿದ್ದಾರೆ. ಅವರ ಪತ್ನಿ ಮತ್ತು ಮಗು ಸುರಕ್ಷಿತವಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow