Heart Attack: ಹಾಸನದಲ್ಲಿ ಮುಂದುವರೆದ ಹೃದಯಾಘಾತದ ಸರಣಿ: ಮತ್ತೋರ್ವ ವ್ಯಕ್ತಿ ಸಾವು!

ಜೂನ್ 28, 2025 - 12:00
 0  17
Heart Attack: ಹಾಸನದಲ್ಲಿ ಮುಂದುವರೆದ ಹೃದಯಾಘಾತದ ಸರಣಿ: ಮತ್ತೋರ್ವ ವ್ಯಕ್ತಿ ಸಾವು!

ಹಾಸನ: ಮೊದಲು 40 ವರ್ಷ‌ ಮೇಲ್ಪಟ್ಟವರಲ್ಲಿ ಹೃದಯಾಘಾತ ಸಂಭವಿಸುತ್ತಿತ್ತು. ಆದ್ರೆ, ಇದೀಗ ಯುವ ಸಮೂಹವನ್ನ ಈ ಹಾರ್ಟ್ ಅಟ್ಯಾಕ್ ಎನ್ನುವುದು ಕಾಡತೊಡಗಿದೆ. ಯುವಕರಲ್ಲಿ ಹೆಚ್ಚು ಹೃದಯಾಘಾತವಾಗುತ್ತಿರುವ ವಿಷಯ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ನಡುವೆ ಶನಿವಾರ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ.  37 ವರ್ಷದ ವ್ಯಕ್ತಿ ಗೋವಿಂದ್‌ ಹೃದಯಾಘಾತದಿಂದ ಶನಿವಾರ ಸಾವು ಕಂಡಿದ್ದಾರೆ.

ಹಾಸನದ ಸಿದ್ದೇಶ್ವರ್ ನಗರದಲ್ಲಿ ಘಟನೆ ನಡೆದಿದೆ. ಆಟೋ ಚಾಲಕನಾಗಿದ್ದ ಗೋವಿಂದ, ಶನಿವಾರ ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಆಟೋ ರೈಡ್‌ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಎದೆನೋವು ಕಾಣಿಸಿಕೊಂಡ ಬೆನ್ನಲ್ಲಿಯೇ ಆಟೋ ಚಲಾಯಿಸಿಕೊಂಡೇ ಜಿಲ್ಲಾಸ್ಪತ್ರೆಗೆ ಗೋವಿಂದ್‌ ಒಬ್ಬರೇ ತೆರಳಿದ್ದಾರೆ.

ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆಯಲ್ಲಿಯೇ ಹೃದಯಾಘಾತದಿಂದ ಗೋವಿಂದ ಸಾವು ಕಂಡಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಹದಿನೇಳು ಮಂದಿ ಹೃದಯಾಘಾತದಿಂದ ಜಿಲ್ಲೆಯಲ್ಲಿ ಸಾವು ಕಂಡಂತಾಗಿದೆ. ಅದರಲ್ಲೂ ಜಿಲ್ಲೆಯಲ್ಲಿ ಹೃದಯಾಘಾತ ಇನ್ನಿಲ್ಲದಂತೆ ಕಾಡುತ್ತಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಯಾರನ್ನೂ ಬಿಡುತ್ತಿಲ್ಲ. ಜಿಲ್ಲೆಯಲ್ಲಿ 1 ತಿಂಗಳ ಅಂತರದಲ್ಲಿ 16 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow