ವಿವಾಹಿತ ಗರ್ಭಿಣಿ ಮಹಿಳೆ ಅನುಮಾನಾಸ್ಪದ ಸಾವು! ಮೃತದೇಹದ ಮುಂದೆ ಎರಡು ದಿನ ಕಳೆದ ಗಂಡ

ಜುಲೈ 24, 2025 - 12:01
 0  9
ವಿವಾಹಿತ ಗರ್ಭಿಣಿ ಮಹಿಳೆ ಅನುಮಾನಾಸ್ಪದ ಸಾವು! ಮೃತದೇಹದ ಮುಂದೆ ಎರಡು ದಿನ ಕಳೆದ ಗಂಡ

ಬೆಂಗಳೂರು:  ಬಾಡಿಗೆ ಮನೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸುಮನಾ (22) ಎಂದು ಗುರುತಿಸಲಾಗಿದ್ದು, ಅವರು ಉತ್ತರ ಪ್ರದೇಶ ಮೂಲದವರು.

ಪತಿ ಶಿವಂ ಜೊತೆ ಬಾಡಿಗೆ ಮನೆಯಲ್ಲಿದ್ದ ಅವರು, ಮೂರು ದಿನಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಸತ್ತ ಮೂರು ದಿನಗಳ ಬಳಿಕ ಶವ ಪತ್ತೆಯಾಗಿದ್ದು, ಶವದ ಮೇಲೆ ಗಾಯದ ಗುರುತುಗಳಿಲ್ಲ. ಮೂಗಿನಿಂದ ರಕ್ತ ಸ್ರಾವವಾಗಿರುವುದು ಮಾತ್ರ ಗುರುತಾಗಿದೆ. ಅಲ್ಲದೇ ಪತ್ನಿಯ ಮೃತದೇಹದ ಜೊತೆಯೇ ಪತಿ ಶಿವಂ ಎರಡು ದಿನ ಕಳೆದಿದ್ದ. ಪತ್ನಿ ಸತ್ತ ಮೊದಲ ದಿನ ಕೆಲಸಕ್ಕೆ ಹೋಗಿಬಂದಿದ್ದ, 2ನೇ ದಿನ ರಾತ್ರಿ ಮೃತದೇಹದ ಮುಂದೆ ಮದ್ಯಪಾನ, ಊಟ ಮಾಡಿದ್ದ, ಎಗ್‌ಬುರ್ಜಿ ಮಾಡ್ಕೊಂಡು ಶವದ ಮುಂದೆ ಊಟ ಮಾಡಿದ್ದ.

ಬುಧವಾರ (ಜು.23) ಮಧ್ಯಾಹ್ನದ ವೇಳೆಗೆ ಮೃಹದೇಹ ಕೊಳೆತು ದುರ್ವಾಸನೆ ಬರಲಾರಂಭಿಸಿದೆ. ಸ್ಥಳೀಯರು ಇದನ್ನು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಕಪಕ್ಕದ ಮನೆಯವರು ಬಂದು ನೋಡುವ ಹೊತ್ತಿಗೆ ಪತಿ ಶಿವಂ ಎಸ್ಕೇಪ್‌ ಆಗಿದ್ದಾನೆ. ಸದ್ಯ ಮಹಿಳೆ ಸುಮನಾ ಅನುಮಾನಾಸ್ಪದ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ನಾಪತ್ತೆಯಾಗಿರೋ ಪತಿ ಶಿವಂ ಗಾಗಿ ಹೆಣ್ಣೂರು ಪೊಲೀಸರಿಂದ ಹುಡುಕಾಟ ನಡೆದಿದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow