ದರ್ಶನ್’ಗೆ ಇಂದು ಬಿಗ್ ಡೇ: ಸುಪ್ರೀಂಕೋರ್ಟ್ ನಿರ್ಧಾರದ ಮೇಲೆ ನಟನ ಜಾಮೀನು ಭವಿಷ್ಯ!

ಜುಲೈ 24, 2025 - 11:10
ಜುಲೈ 24, 2025 - 11:12
 0  5
ದರ್ಶನ್’ಗೆ ಇಂದು ಬಿಗ್ ಡೇ: ಸುಪ್ರೀಂಕೋರ್ಟ್ ನಿರ್ಧಾರದ ಮೇಲೆ ನಟನ ಜಾಮೀನು ಭವಿಷ್ಯ!

ಸುಪ್ರೀಂಕೋರ್ಟ್ನಲ್ಲಿ ಇಂದು  ನಟ ದರ್ಶನ್ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಲಿದೆ. ನಟ ದರ್ಶನ್ ಮತ್ತೆ ಜೈಲು ಪಾಲಾಗ್ತಾರಾ ಇಲ್ಲವೇ ಹೈಕೋರ್ಟ್ ಕೊಟ್ಟಿರುವ ಜಾಮೀನು ಮುಂದುವರಿಯುತ್ತಾ ಅನ್ನೋದು ಸುಪ್ರೀಂಕೋರ್ಟ್ ನೀಡುವ ಆದೇಶವನ್ನು ಅವಲಂಬಿಸಿದೆ.

ಸದ್ಯ ಡೆವಿಲ್ ಸಿನಿಮಾದ ಶೂಟಿಂಗ್ ಗಾಗಿ ದರ್ಶನ್ ಥೈಲೆಂಡ್ ನಲ್ಲಿದ್ದಾರೆ. ಅಲ್ಲಿಗೆ ಹೊಗಿ ಶೂಟಿಂಗ್ ಅಂತ ದರ್ಶನ್ ಕಾಣಿಸಿಕೊಂಡಿದ್ದರೆ ಪರವಾಗಿರಲಿಲ್ಲಅದು ಬಿಟ್ಟು ಮೋಜು ಮಸ್ತಿ ಅಂತ ಲಾಬ್ ಸ್ಟರ್ ಹಿಡ್ಕೊಂಡು ಪಾರ್ಟಿ ಮಾಡ್ತಿರೋ ದರ್ಶನ್ ರನ್ನ ನೋಡಿ ಆರೋಪಿ ಆಗಿದ್ದರು ಇಷ್ಟೆಲ್ಲ ಶೋಕಿ ಬೇಕಿತ್ತಾ ಅಂದಿದ್ದರು. ಎಲ್ಲಾ ವಿಡಿಯೋಗಳು ಕೊರ್ಟ್ ಗಮನಕ್ಕೆ ಬರದೆ ಇರುತ್ತಾ? ಚಾನ್ಸೇ ಇಲ್ಲ ಅದಕ್ಕೆ ಈಗ ಜಾಮೀನು ಅರ್ಜಿ ವಿಚಾರಣೆ ರದ್ದಾಗುವ ಹಂತಕ್ಕೆ ಬಂದಿದೆ.

ದರ್ಶನ್ ಆರೋಗ್ಯದ ನೆಪ ಹೇಳಿ ಬೆನ್ನು ನೋವಿನ ಕಾರಣ ಕುಂಟುತ್ತಲೇ ಬಳ್ಳಾರಿ ಜೈಲಿಂದ ಹೊರ ಬಂದರು ಇಷ್ಟು ಸಾಲದು ಅಂತ ಶೂಟಿಂಗ್ ನೆಪ ಹೇಳಿ ಜಾಮೀನು ವಿಸ್ತರಣೆ ಮಾಡಿಕೊಂಡರು. ಅತ್ತ ಶಸ್ತ್ರ ಚಿಕಿತ್ಸೆಯು ಇಲ್ಲದಂತೆ ಶೂಟಿಂಗಲ್ಲಿ ಭಾಗವಹಿಸಿದ್ದಲ್ಲದೆ ಸಾರ್ವಜನಿಕವಾಗಿ ಕೆಲವು ಸಮಾರಂಭಗಳಲ್ಲಿಯ ಕಾಣಿಸಿದ್ದರು.

ಜಾಮೀನು ರದ್ದು ಕೋರಿದ ವಿಚಾರಣೆಯನ್ನ ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು. ಆದರೆ ಅವರು ಗೈರಾಗಿದ್ದರು. ಅವರ ಬದಲಾಗಿ ವಾದ ಮಂಡಿಸಲು ಬಂದಿದ್ದ ಲಾಯರ್ ಹಿಂದಿನ ದಿನ ರಾತ್ರಿ ಕೇಸ್ ಬಂದ ಕಾರಣ ಇಷ್ಟು ಬೇಗ ಕೇಸ್ನ ವಾದ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಒಂದು ಒಂದು ದಿನ ಸಮಯ ಬೇಕು ಎಂದಾಗ ಕೋರ್ಟ್ ಅಸ್ತು ಅಂದಿದ್ದು ಗುರುವಾರಕ್ಕೆ ಮತ್ತೊಂದು ಟೆನ್ಷನ್ ದರ್ಶನ್ ಗೆ ಶುರುವಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow