ದೇಶದಲ್ಲಿ ನಿಲ್ಲದ 'ಕಾಮುಕರ ಅಟ್ಟಹಾಸ': ಚಲಿಸುತ್ತಿದ್ದ ಬಸ್ʼನಲ್ಲಿ ಮಹಿಳೆ ಮೇಲೆ ಅತ್ಯಾಚಾರ!

ಫೆಬ್ರವರಿ 15, 2025 - 22:13
 0  24
ದೇಶದಲ್ಲಿ ನಿಲ್ಲದ 'ಕಾಮುಕರ ಅಟ್ಟಹಾಸ': ಚಲಿಸುತ್ತಿದ್ದ ಬಸ್ʼನಲ್ಲಿ ಮಹಿಳೆ ಮೇಲೆ ಅತ್ಯಾಚಾರ!

ಫರೀದಾಬಾದ್: ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತ. ಮಹಿಳಾ ಸುರಕ್ಷತೆ ವಿಷಯದಲ್ಲಿ ಮಾತ್ರ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ. ಹೌದು ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇರುತ್ತವೆ. ಇದೀಗ ಖಾಸಗಿ ಬಸ್​ನಲ್ಲಿ ಚಾಲಕನೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಫರೀದಾಬಾದ್​ನಲ್ಲಿ ನಡೆದಿದೆ.

 ಅಪರಾಧ ನಡೆಯುತ್ತಿರುವಾಗ ಇದನ್ನು ತಪ್ಪಿಸುವ ಬದಲು ಕಂಡಕ್ಟರ್​ ಯಾರಾದರೂ ಬಸ್ಸಿನ ಕಡೆಗೆ ಬರುತ್ತಾರೋ ಎಂದು ನೋಡುತ್ತಾ ಕಾದುಕುಳಿತಿದ್ದ ಎಂದು ಪೊಲೀಸರು ಹೇಳಿದ್ದು, ಡ್ರೈವರ್ ಜತೆ ಕಂಡಕ್ಟರ್​ನನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆ ನೀಡಿರುವ ಮಾಹಿತಿ ಪ್ರಕಾರ, ಮಹಿಳೆ ಹಲವು ಫ್ಲಾಟ್​ಗಳಲ್ಲಿ ಕೆಲಸ ಮಾಡುತ್ತಿದ್ದಳು, ಸೆಕ್ಟರ್​ 56ರಲ್ಲಿ ಮನೆಗೆ ಹೋಗಲು ಸೆಕ್ಟರ್​ 17 ಬೈಪಾಸ್ ರಸ್ತೆಯಲ್ಲಿ ಸಂಜೆ 6 ಗಂಟೆಗೆ ಬಸ್ಸಿಗಾಗಿ ಕಾಯುತ್ತಿದ್ದಳು. ಆಗ ಬಿಳಿ ಬಣ್ಣದ ಬಸ್ಸೊಂದು ಬಂದಿತ್ತು ಚಾಲಕ ಆಕೆಗೆ ಬಸ್ ಹತ್ತಲು ಅವಕಾಶ ನೀಡಿದ್ದ. ಹತ್ತಿದ ಬಳಿಕ ಬಸ್ಸಿನಲ್ಲಿ ತಾನೊಬ್ಬಳೇ ಇರುವುದು ಅರಿವಿಗೆ ಬಂದಿತ್ತು.

ಬಸ್ ಖಾಲಿಯಾಗಿರುವುದರ ಬಗ್ಗೆ ಆಕೆ ಕಂಡಕ್ಟರ್‌ನನ್ನು ಪ್ರಶ್ನಿಸಿದಾಗ, ಮುಂದಿನ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರು ಹತ್ತುತ್ತಾರೆ ಎಂದು ಹೇಳಿದ್ದ. ಆದರೆ, ಚಾಲಕ ಬಸ್ಸನ್ನು ಯಾರೂ ಇಲ್ಲದ ಸ್ಥಳದಲ್ಲಿ ನಿಲ್ಲಿಸಿದ್ದ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಚಾಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ಕಂಡಕ್ಟರ್ ಎಲ್ಲಾ ಕಿಟಕಿಗಳನ್ನು ಮುಚ್ಚಿದ್ದಾನೆ ಎನ್ನಲಾಗಿದೆ. ಕಂಡಕ್ಟರ್ ಘಟನಾ ಸ್ಥಳದಲ್ಲೇ ಇದ್ದು, ಇತರರ ಮೇಲೆ ನಿಗಾ ಇಟ್ಟಿದ್ದ.

ಹಲ್ಲೆಯ ನಂತರ, ಆರೋಪಿಯು ಮಹಿಳೆಯನ್ನು ಸೆಕ್ಟರ್ 17 ರಲ್ಲಿ ಇಳಿಸಿ, ಪೊಲೀಸರಿಗೆ ವರದಿ ಮಾಡಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಬೆದರಿಕೆಗಳ ಹೊರತಾಗಿಯೂ, ಮಹಿಳೆ ತಕ್ಷಣ ಪೊಲೀಸರನ್ನು ಸಂಪರ್ಕಿಸಿದಳು ಮತ್ತು ಸೆಕ್ಟರ್ 17 ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 64 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow