IBPS Clerk Recruitment: ಸಾರ್ವಜನಿಕ ಬ್ಯಾಂಕುಗಳಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಸುವ ಉದ್ದೇಶದಿಂದ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನಲ್ ಸೆಲೆಕ್ಷನ್ (IBPS) ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆಗಸ್ಟ್ 1ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 21ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:
-
ಅಧಿಕೃತ ವೆಬ್‌ಸೈಟ್ ibps.in ಗೆ ಭೇಟಿ ನೀಡಿ
-
ಮುಖಪುಟದಲ್ಲಿ "CRP Clerks-XV" ಲಿಂಕ್ ಕ್ಲಿಕ್ ಮಾಡಿ
-
“Apply Online” ಆಯ್ಕೆ ಮಾಡಿ
-
ಅರ್ಜಿ ನಮೂನೆ ಭರ್ತಿ ಮಾಡಿ
-
ದಾಖಲೆಗಳನ್ನು ಅಪ್‌ಲೋಡ್ ಮಾಡಿ
-
ಅರ್ಜಿ ಶುಲ್ಕ ಪಾವತಿಸಿ, ಸಲ್ಲಿಸಿ
ಅರ್ಹತಾ ಮಾನದಂಡಗಳು:
-
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವುದು
-
ವಯೋಮಿತಿ: ಕನಿಷ್ಠ 20 ವರ್ಷ – ಗರಿಷ್ಠ 28 ವರ್ಷ
-
ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮದಂತೆ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯ
-
ಆಯ್ಕೆ ಪ್ರಕ್ರಿಯೆ:
IBPS ಕ್ಲರ್ಕ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:
-
ಪೂರ್ವಭಾವಿ ಪರೀಕ್ಷೆ (Prelims)
-
ಮುಖ್ಯ ಪರೀಕ್ಷೆ (Mains)
-
ಸಂದರ್ಶನ ಅಥವಾ ದಾಖಲಾತಿ ಪರಿಶೀಲನೆ
-
ಪೂರ್ವಭಾವಿ ಪರೀಕ್ಷೆ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಫಲಿತಾಂಶ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪ್ರಕಟವಾಗಬಹುದು
-
ಮುಖ್ಯ ಪರೀಕ್ಷೆ ನವೆಂಬರ್ 2025ರಲ್ಲಿ ನಡೆಯಲಿದೆ
-
ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಯಲಿವೆ
ಸಲಹೆ:
ಅರ್ಹ ಅಭ್ಯರ್ಥಿಗಳು ನೇಮಕಾತಿಯ ಸಂಪೂರ್ಣ ಅಧಿಸೂಚನೆ ಮತ್ತು ಪರಿಕ್ಷಾ ಮಾದರಿ ಸಂಬಂಧಿತ ಮಾಹಿತಿಗಾಗಿ ibps.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
Sources: IBPS Official Notification
Category: ಉದ್ಯೋಗ | ನೇಮಕಾತಿ | ಬ್ಯಾಂಕ್ ಹುದ್ದೆಗಳು
ನಿಮ್ಮ ಪ್ರತಿಕ್ರಿಯೆ ಏನು?






