ಸರ್ಕಾರಿ ಕೆಲಸ ಹುಡುಕುತ್ತಿದ್ದವರಿಗೆ ಸುವರ್ಣಾವಕಾಶ: ಇಂದೇ ಇಲ್ಲಿ ಅಪ್ಲೈ ಮಾಡಿ

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಸಹಾಯಕರ ಹುದ್ದೆ ಸೇರಿ ಇತರೆ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಈಗಾಗಲೇ ಈ ಹುದ್ದೆಗಳನ್ನು ಆಹ್ವಾನ ಮಾಡಿತ್ತು. ಆದರೆ ಇದೀಗ ವಯೋಮಿತಿ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಅರ್ಜಿಯನ್ನ ಮತ್ತೆ ಕರೆಯಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸದೇ ಇರುವವರು ಇಂದು ಸಂಜೆ ಒಳಗೆ ಅಪ್ಲೇ ಮಾಡಬಹುದು.
ಕೆಲಸಗಳಿಗೆ ಎಲ್ಲ ವರ್ಗದವರಿಗೂ 3 ವರ್ಷದ ವಯೋಮಿತಿಯನ್ನು ಹೆಚ್ಚು ಮಾಡಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸದೇ ಇರುವವರು ಈಗ ಅಪ್ಲೇ ಮಾಸಬಹುದು. 2024ರ ಮಾರ್ಚ್ನಲ್ಲಿ ಈ ಉದ್ಯೋಗಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಕೊನೆ ದಿನಾಂಕ, ಉದ್ಯೋಗಗಳು, ಬೇಕಾದ ಅರ್ಹತೆ ಏನು ಎಂದು ಇಲ್ಲಿ ಮಾಹಿತಿ ಇದೆ. ಸರ್ಕಾರಿ ಉದ್ಯೋಗ ಬಯಸುವವರಿಗೆ ಇದೊಂದು ಸುವರ್ಣಾವಕಾಶ ಆಗಿದೆ.
ಉದ್ಯೋಗದ ಹೆಸರು;
ಕಿರಿಯ ಸಹಾಯಕ ಸೇರಿ ಇತರೆ ಉದ್ಯೋಗಗಳು ಇವೆ
ಒಟ್ಟು ಹುದ್ದೆಗಳು; 07
ಇದರಲ್ಲಿ ಉಳಿಕೆ ಮೂಲ ವೃಂದಕ್ಕೆ 06, ಕಲ್ಯಾಣ ಕರ್ನಾಟಕಕ್ಕೆ 01 ಹುದ್ದೆ ಇದೆ.
ಮಾಸಿಕ ವೇತನ- ₹34,100 ರಿಂದ ₹67,600
ವಯೋಮಿತಿ ಸಡಿಲಿಕೆ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 35- 38 ವರ್ಷ
ಹಿಂದುಳಿದ ವರ್ಗಗಳ ಅಭ್ಯರ್ಥಿಗಳು- 38- 41 ವರ್ಷ
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳು- 40- 43 ವರ್ಷ..
ಅರ್ಜಿ ಸಲ್ಲಿಸಬೇಕು ಎನ್ನುವರು ಈ ವೆಬ್ಸೈಟ್ಗೆ ಭೇಟಿ ನೀಡಿ;
https://cetonline.karnataka.gov.in
ನಿಮ್ಮ ಪ್ರತಿಕ್ರಿಯೆ ಏನು?






