ನಿಮ್ಮದು ITI ಪಾಸಾಗಿದ್ಯಾ!? ಹಾಗಿದ್ರೆ ಪೂರ್ವ ಕೇಂದ್ರ ರೈಲ್ವೆಯಲ್ಲಿದೆ ಭರ್ಜರಿ ಉದ್ಯೋಗ, ಆಸಕ್ತರು ಇಂದೇ ಅಪ್ಲೈ ಮಾಡಿ!

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ರೈಲ್ವೆ ಇಲಾಖೆಯ ವಲಯಗಳಲ್ಲಿ ಒಂದಾದ ಪೂರ್ವ ಕೇಂದ್ರ ರೈಲ್ವೆ ವಲಯದ ನೇಮಕಾತಿ ಮಂಡಳಿಯು 2025-26ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಮಾಸಿಕ ಸಂಬಳದ ಜತೆಗೆ, ಉತ್ತಮ ತರಬೇತಿಯನ್ನು ನೀಡಿ, ಪ್ರಮಾಣಪತ್ರವನ್ನು ನೀಡುವ ಹುದ್ದೆಗಳು ಇವಾಗಿವೆ
ನೇಮಕಾತಿ ಪ್ರಾಧಿಕಾರ : ಪೂರ್ವ ಕೇಂದ್ರ ರೈಲ್ವೆ, ನೇಮಕಾತಿ ಮಂಡಳಿ.
ಹುದ್ದೆ ಹೆಸರು : ಆಕ್ಟ್ ಅಪ್ರೆಂಟಿಸ್ ಹುದ್ದೆಗಳು
ಹುದ್ದೆಗಳ ಸಂಖ್ಯೆ : 1154
ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಜತೆಗೆ, ಐಟಿಐ ಪಾಸ್ ಮಾಡಿರಬೇಕು.
ಶೈಕ್ಷಣಿಕ ಅರ್ಹತೆಗಳು
ಅಭ್ಯರ್ಥಿಗಳು 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಶಿಕ್ಷಣವನ್ನು ಪಾಸ್ ಮಾಡಿರಬೇಕು.
ವಿವಿಧ ಟ್ರೇಡ್ನಲ್ಲಿ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಬಹುದು.
ಪೂರ್ವ ಕೇಂದ್ರ ರೈಲ್ವೆ ಆಕ್ಟ್ ಅಪ್ರೆಂಟಿಸ್ ಹುದ್ದೆಗಳನ್ನು ಇಲೆಕ್ಟ್ರಿಕಲ್, ಪೇಂಟರ್, ಮೆಕ್ಯಾನಿಕಲ್, ಫಿಟ್ಟರ್, ವೆಲ್ಡರ್, ಕಾರ್ಪೆಂಟರ್, ಮೆಕ್ಯಾನಿಕ್ ಮಷಿನ್ ಟೂಲ್, ಟರ್ನರ್, ವೈಯರ್ಮನ್, ರೆಫ್ರಿಜೆರೇಷನ್ ಟ್ರೇಡ್ಗಳಲ್ಲಿ ನೇಮಕ ಮಾಡಲಾಗುತ್ತದೆ.
ಇತರೆ ಹೆಚ್ಚಿನ ಮಾಹಿತಿಗಳಿಗೆ ನೋಟಿಫಿಕೇಶನ್ ಓದಲು ಪೂರ್ವ ಕೇಂದ್ರ ರೈಲ್ವೆಯ ಅಧಿಕೃತ ವೆಬ್ಸೈಟ್ ವಿಳಾಸ: https://www.rrcecr.gov.in/ ಗೆ ಭೇಟಿ ನೀಡಿರಿ.
.
ವಯಸ್ಸಿನ ಅರ್ಹತೆ
ಅರ್ಜಿ ಸಲ್ಲಿಸಲು ನಿಗದಿತ ಕೊನೆ ದಿನಾಂಕಕ್ಕೆ ಕನಿಷ್ಠ 15 ವರ್ಷ ಪೂರೈಸಿರಬೇಕು.
ಗರಿಷ್ಠ 24 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿಗೆ ಲಿಂಕ್ ಬಿಡುಗಡೆ ದಿನಾಂಕ: 25-01-2025
ಆನ್ಲೈನ್ ಅರ್ಜಿಗೆ ಕೊನೆ ದಿನಾಂಕ: 14-02-2025 ರ ರಾತ್ರಿ 11-59 ಗಂಟೆವರೆಗೆ.
ನಿಮ್ಮ ಪ್ರತಿಕ್ರಿಯೆ ಏನು?






