PUC ಪಾಸಾಗಿದ್ಯಾ..? ಹಾಗಿದ್ರೆ ಇಲ್ಲಿದೆ ಬಂಪರ್ ಉದ್ಯೋಗ, ಆಸಕ್ತರು ಅಪ್ಲೈ ಮಾಡಿ!

ನೀವು PUC ಪಾಸಾಗಿದ್ದರೂ ಕೆಲಸ ಇಲ್ಲದೇ ಮನೆಯಲ್ಲಿ ಖಾಲಿ ಕೂತಿದ್ಜೀರಾ!? ಹಾಗಿದ್ರೆ ನಿಮಗೆ ಇಲ್ಲಿದೆ ಭರ್ಜರಿ ಅವಕಾಶ. ಆಸಕ್ತರು ಕೂಡಲೇ ಅಪ್ಲೈ ಮಾಡುವುದರ ಮೂಲಕ ಕೆಲಸಗಿಟ್ಟಿಸಿಕೊಳ್ಳಬಹುದು.
ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 200ಕ್ಕೂ ಅಧಿಕ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳು ಇವಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಕೇಂದ್ರ ಶಿಕ್ಷಣ ಸಚಿವಾಲಯದಡಿ ಸಿಬಿಎಸ್ಸಿ ಇಲಾಖೆ ಬರುತ್ತದೆ. ಹೀಗಾಗಿ ಸ್ಯಾಲರಿ, ಬಡ್ತಿ ಇತ್ಯಾದಿ ಕೇಂದ್ರ ಸರ್ಕಾರದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಆಯ್ಕೆಯಾದ ನೌಕರರಿಗೆ ತಲುಪಲಿವೆ.
ಸಿಬಿಎಸ್ಸಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹರು ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳ ಕುರಿತು ಇಲ್ಲಿ ಮಾಹಿತಿ ಇದೆ. 2025ರ ವರ್ಷದಲ್ಲಿ ಸಿಬಿಎಸ್ಸಿ ನೇಮಕ ಮಾಡುತ್ತಿರುವ ಮೊದಲ ಹುದ್ದೆಗಳಾಗಿವೆ. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಅಗತ್ಯ ಮಾಹಿತಿ, ಮಾನದಂಡಗಳು, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹೇಗೆ ಇರುತ್ತದೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿ ಸಂಪೂರ್ಣವಾಗಿದೆ.
ಉದ್ಯೋಗಗಳ ಹೆಸರು?
ಸೂಪರಿಂಟೆಂಡೆಂಟ್
ಜೂನಿಯರ್ ಅಸಿಸ್ಟೆಂಟ್
ಸ್ಯಾಲರಿ ಎಷ್ಟು ಇದೆ?
ಸೂಪರಿಂಟೆಂಡೆಂಟ್- 35,400 ದಿಂದ 1,12,400 ರೂಪಾಯಿಗಳು
ಜೂ.ಅಸಿಸ್ಟೆಂಟ್- 19,900 ದಿಂದ 63,200 ರೂಪಾಯಿಗಳು
ಒಟ್ಟು ಕೆಲಸಗಳು– 112
ಕೆಲಸ ಮಾಡುವ ಸ್ಥಳ- ಭಾರತದ್ಯಾಂತ
ವಿದ್ಯಾರ್ಹತೆ :
ಸೂಪರಿಂಟೆಂಡೆಂಟ್- ಯಾವುದೇ ಪದವಿ (ಕಂಪ್ಯೂಟರ್ ಜ್ಞಾನ, ಹಿಂದಿ, ಇಂಗ್ಲಿಷ್ ಟೈಪಿಂಗ್ ಸ್ಕಿಲ್ ಇರಬೇಕು)
ಜೂನಿಯರ್ ಅಸಿಸ್ಟೆಂಟ್- ದ್ವಿತಿಯ ಪಿಯುಸಿ (ಕಂಪ್ಯೂಟರ್ ಜ್ಞಾನ, ಹಿಂದಿ, ಇಂಗ್ಲಿಷ್ ಟೈಪಿಂಗ್ ಸ್ಕಿಲ್ ಇರಬೇಕು)
ವಯೋಮಿತಿ
18 ರಿಂದ 30 ವರ್ಷಗಳ ಒಳಗಿನವರಿಗೆ ಅವಕಾಶ
ಮುಖ್ಯವಾದ ದಿನಾಂಕಗಳು
ನೋಟಿಫಿಕೇಶನ್ ರಿಲೀಸ್ ದಿನಾಂಕ- 31 ಡಿಸೆಂಬರ್ 2024
ಅರ್ಜಿ ಆರಂಭದ ದಿನಾಂಕ- 02 ಜನವರಿ 2025
ಅರ್ಜಿಗೆ ಕೊನೆಯ ದಿನಾಂಕ- 31 ಜನವರಿ 2025
ನಿಮ್ಮ ಪ್ರತಿಕ್ರಿಯೆ ಏನು?






