ನಿರುದ್ಯೋಗಿಗಳಿಗೆ ಬಿಗ್ ಆಫರ್: ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳಿಗೆ ಆಹ್ವಾನ; ಗೋಲ್ಡನ್ ಆಫರ್ ಮಿಸ್ ಮಾಡ್ಕೋಬೇಡಿ!

ಬಿಹಾರ ಪಬ್ಲಿಕ್ ಸರ್ವೀಸ್ ಕಮಿಷನ್ ಇಲಾಖೆಯು ವಿವಿಧ ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬಿಡುಗಡೆಗೊಂಡಿರುವ ಅಧಿಕೃತ ನೋಟಿಫಿಕೇಶನ್ ಗಮನಿಸಿ ಬಳಿಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಸಾವಿರಕ್ಕೂ ಅಧಿಕ ಉದ್ಯೋಗಗಳಿದ್ದು ಅಪ್ಲೇ ಮಾಡಿದವರನ್ನ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂಬಳ-
₹61,500 ರಿಂದ ₹72,000
₹59,857 ರಿಂದ ₹68,795
ಒಟ್ಟು ಹುದ್ದೆಗಳು-
1,957
ವಿದ್ಯಾರ್ಹತೆ-
ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು. ವಿವಿಧ ಹುದ್ದೆಗಳಿಗೆ ಬೇರೆ ಬೇರೆ ಶೈಕ್ಷಣಿಕ ಅರ್ಹತೆ ಕೇಳಲಾಗಿದೆ. ಅಭ್ಯರ್ಥಿಗಳು ನೋಟಿಫಿಕೆಶನ್ ವೀಕ್ಷಿಸಬೇಕು.
ಈ ಹುದ್ದೆಗಳ ಪ್ರಮುಖ ದಿನಾಂಕಗಳು
ಅರ್ಜಿ ಆರಂಭದ ದಿನಾಂಕ- ಸೆಪ್ಟೆಂಬರ್ 28, 2024
ಅರ್ಜಿ ಕೊನೆಯ ದಿನಾಂಕ- ಅಕ್ಟೋಬರ್ 18, 2024
ವಯೋಮಿತಿ-
ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ರಿಂದ 40 ವರ್ಷಗಳು
ಪುರುಷರಿಗೆ ಗರಿಷ್ಠ- 37 ವರ್ಷಗಳು
ಮಹಿಳೆಯರಿಗೆ ಗರಿಷ್ಠ- 40 ವರ್ಷಗಳು
ಅರ್ಜಿ ಶುಲ್ಕ ಎಷ್ಟು ಇದೆ..?
ಜನರಲ್, ಓಬಿಸಿ, ಇತರೆ ಅಭ್ಯರ್ಥಿಗಳು- 600 ರೂ.ಗಳು
ಎಸ್ಸಿ, ಎಸ್ಟಿ, ವಿಶೇಷ ಚೇತನರು- 150 ರೂ.ಗಳು
ಎಲ್ಲ ವರ್ಗದ ಮಹಿಳೆಯರಿಗೆ- 150 ರೂ.ಗಳು
ಆಯ್ಕೆ ಪ್ರಕ್ರಿಯೆ-
ಪ್ರಿಲಿಮ್ಸ್ ಪರೀಕ್ಷೆ,
ಮುಖ್ಯ ಪರೀಕ್ಷೆ ಹಾಗೂ
ವ್ಯಕ್ತಿತ್ವ ಪರೀಕ್ಷೆ ಇರುತ್ತವೆ
ನಿಮ್ಮ ಪ್ರತಿಕ್ರಿಯೆ ಏನು?






