India vs England: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್’ನಿಂದ 15 ಸದಸ್ಯರ ಬಲಿಷ್ಠ ತಂಡ ಪ್ರಕಟ..!

ಜುಲೈ 29, 2025 - 08:59
 0  10
India vs England: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್’ನಿಂದ 15 ಸದಸ್ಯರ ಬಲಿಷ್ಠ ತಂಡ ಪ್ರಕಟ..!

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಆತಿಥೇಯ ಇಂಗ್ಲೆಂಡ್ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಪಂದ್ಯದಲ್ಲಿ ವಿಶೇಷ ಆಕರ್ಷಣೆಯೆಂದರೆ, ಮೂರು ವರ್ಷಗಳ ಹಿಂದೆ ಏಕೈಕ ಟೆಸ್ಟ್ ಆಡಿದ್ದ ಆಲ್ರೌಂಡರ್ ಜೇಮೀ ಓವರ್ಟನ್ ಅವರನ್ನು ಪುನಃ ತಂಡದಲ್ಲಿ ಸೇರ್ಪಡೆ ಮಾಡಲಾಗಿದೆ.

ಇದುವರೆಗೆ 2-1 ಅಂತರದಲ್ಲಿ ಮುನ್ನಡೆಯಲ್ಲಿರುವ ಇಂಗ್ಲೆಂಡ್, ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಭರ್ಜರಿ ಆರಂಭ ಪಡೆದರೂ ಪಂದ್ಯವನ್ನು ಡ್ರಾಗೊಳಿಸಲು ಭಾರತಕ್ಕೆ ಸಾಧ್ಯವಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 669 ರನ್ ಬಾರಿಸಿ ಭಾರತದ ಮೇಲೆ 311 ರನ್ ಮುನ್ನಡೆ ಸಾಧಿಸಿತ್ತು. ಇದರ ಬೆನ್ನಲ್ಲೇ ಭಾರತ ಶೂನ್ಯಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು.

ಆದರೆ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಅತ್ಯುತ್ತಮ ಹೋರಾಟ ತೋರಿದರು. ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರು ಶತಕಗಳ ಜೊತೆಗೆ ದೀರ್ಘದ ವಿಕೆಟ್ಪಾಲುದಾರಿಕೆ ನೀಡಿ ಪಂದ್ಯವನ್ನು ಡ್ರಾ ಮಾಡಿದರು.

ಈಗ ಲಂಡನ್ ಓವಲ್ ಮೈದಾನದಲ್ಲಿ ಜುಲೈ 31ರಿಂದ ಆರಂಭವಾಗಲಿರುವ ಐದನೇ ಟೆಸ್ಟ್ ಪಂದ್ಯ, ಉಭಯ ತಂಡಗಳಿಗೂ ನಿರ್ಣಾಯಕವಾಗಿದ್ದು, ಇಂಗ್ಲೆಂಡ್ ಗೆದ್ದರೆ ಸರಣಿ 3-1ರೊಂದಿಗೆ ತನ್ನದಾಗಲಿದೆ. ಆದರೆ ಭಾರತ ಗೆದ್ದರೆ, ಸರಣಿ 2-2ರಿಂದ ಸಮಬಲವಾಗಲಿದೆ. ಎರಡೂ ತಂಡಗಳು ಪಂದ್ಯವನ್ನು ಗೆಲ್ಲಲು ತೀವ್ರ ಬಯಕೆಯಲ್ಲಿವೆ.

ಇಂಗ್ಲೆಂಡ್ 15 ಸದಸ್ಯರ ತಂಡದಲ್ಲಿ ಪ್ರಮುಖ ಬದಲಾವಣೆವೆಂದರೆ ಜೇಮೀ ಓವರ್ಟನ್ ಸೇರ್ಪಡೆ. ಭಾರತೀಯ ತಂಡದಲ್ಲಿ ಗಾಯಗೊಂಡ ರಿಷಭ್ ಪಂತ್ ಬದಲಿಗೆ ಎನ್. ಜಗದೀಶನ್ ಅವರನ್ನು ಆಯ್ಕೆ ಮಾಡಲಾಗಿದೆ. ತೀವ್ರ ಪೈಪೋಟಿಯ ಪಂದ್ಯಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೋ ರೂಟ್, ಕ್ರಿಸ್ ವೋಕ್ಸ್, ಜ್ಯಾಕ್ ಕ್ರೌಲಿ, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಬ್ರೈಡನ್ ಕಾರ್ಸೆ, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್, ಓಲಿ ಪೋಪ್, ಲಿಯಾಮ್ ಡಾಸನ್, ಜೇಮೀ ಸ್ಮಿತ್, ಜಾಕೋಬ್ ಬೆಥೆಲ್, ಜೋಫ್ರಾ ಆರ್ಚರ್, ಜೋಶ್ ಟಂಗ್.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow