Niveditha Gowda: ಈ ತರ ಕುಣಿಯೋಕೆ ನಾಚಿಕೆ ಆಗಲ್ವಾ? ಎಂದವರಿಗೆ ನಿವೇದಿತಾ ಗೌಡ ಉತ್ತರವೇನು ಗೊತ್ತಾ..?

ಕ್ಯೂಟ್ ಕಪಲ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಜೋಡಿ ಚಂದನ್ ಶೆಟ್ಟಿ - ನಿವೇದಿತಾ ಗೌಡ. ನಾಲ್ಕು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಚಂದನ್ ಶೆಟ್ಟಿ - ನಿವೇದಿತಾ ಗೌಡ ದೂರಾವಾಗಿರುವ ವಿಚಾರ ಎಲ್ಲಾರಿಗೂ ಗೊತ್ತಿದೆ. ಪರಸ್ಪರ ಒಪ್ಪಿಗೆ ಮೇರೆಗೆ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆಯುವ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ರು. ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಿಂದ ಕೆಲ ಕಾಲ ದೂರ ಉಳಿದಿದ್ದ ನಿವೇದಿತಾ ಗೌಡ ಮತ್ತೆ ಆ್ಯಕ್ಟಿವ್ ಆಗಿದ್ದಾರೆ.
ದಿನಕ್ಕೊಂದು ರೀಲ್ಸ್ ಪೋಸ್ಟ್ ಮಾಡುವ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಿವಿ ಗೊಂಬೆ ಹಾಕೋ ಪ್ರತಿ ರೀಲ್ಸ್ಗೂ ಬಗೆ ಬಗೆ ಕಮೆಂಟ್ ಬರ್ತಿದೆ. ಹೆಚ್ಚಾಗಿ ಬ್ಯಾಡ್ ಕಮೆಂಟ್ಗಳೇ ಬರುತ್ತೆ. ಫಾರಿನ್ ಟ್ರಿಪ್ಗೆ ಹೋಗಿದ್ದ ನಿವೇದಿತಾ ಗೌಡ ಬಿಕಿನಿ ಹಾಕೊಂಡು ಮಸ್ತ್ ಆಗಿ ಕುಣಿದಿದ್ರು. ಈ ರೀಲ್ಸ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಸೀರೆ ಹಾಕಿ ಕುಣಿದ್ರೂ ನಿವಿ ಹಾಟ್ ಆಗಿಯೇ ಕಾಣಿಸಿಕೊಳ್ತಾರೆ.
ತನ್ನ ಬೋಲ್ಡ್ ಅವತಾರಗಳ ಮೂಲಕವೇ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ತಿದ್ದಾರೆ. ನಿವೇದಿತಾ ಗೌಡ ರೀಲ್ಸ್ಗೆ ಪಡ್ಡೆ ಹುಡುಗರು ಬ್ಯಾಡ್ ಬ್ಯಾಡ್ ಕಮೆಂಟ್ ಗಳನ್ನೇ ಮಾಡ್ತಾರೆ. ಈ ಕಮೆಂಟ್ ಗಳಿಗೆಲ್ಲಾ ನಿವೇದಿತಾ ಗೌಡ ಉತ್ತರ ನೀಡಿದ್ದಾರೆ.
ಸ್ನೇಹಿತೆಯ ಜೊತೆ ಕುಳಿತು ವಿಡಿಯೋ ಮಾಡಿ ಬ್ಯಾಡ್ ಕಮೆಂಟ್ ಗಳಿಗೆ ಕೌಂಟರ್ ಆಗಿ ಉತ್ತರ ನೀಡಿದ್ದಾರೆ. ವಿಡಿಯೋ ಶೇರ್ ಮಾಡಿದ ನಿವೇದಿತಾ ಗೌಡ, ಕಮೆಂಟ್ ಗಳಿಗೆ ನಾವು ಉತ್ತರ ನೀಡ್ತಿದ್ದೇವೆ ಎಂದ್ರು. ನೀವು ಆವರೇಜ್ ಬಾರ್ ಡ್ಯಾನ್ಸರ್ ಎಂಬ ಕಮೆಂಟ್ಗೆ ಉತ್ತರ ಕೊಟ್ಟ ನಿವೇದಿತಾ ಗೆಳತಿ, ನಾವು ಆವೆರೇಜ್ ಬಾರ್ ಡ್ಯಾನ್ಸರ್ ಅಲ್ಲ, ಗುಡ್ ಬಾರ್ ಡ್ಯಾನ್ಸರ್ಸ್ ಎಂದಿದ್ದಾರೆ.
ನಿವೇದಿತಾ ಗೌಡ ನಿನಗೆ ಈ ರೀತಿ ಡ್ಯಾನ್ಸ್ ಮಾಡಲು ನಾಚಿಕೆ ಆಗಲ್ವಾ ಎಂಬ ಕಮೆಂಟ್ಗೆ ಉತ್ತರಿಸಿದ ನಿವೇದಿತಾ ಗೌಡ, ನೋ..ನೋ ಯಾಕೆ ನಾಚಿಕೆ ಆಗ್ಬೇಕು ಎಂದಿದ್ದಾರೆ. ಜೊತೆಯಲ್ಲಿದ್ದ ಗೆಳತಿಯನ್ನು ತಬ್ಬಿಕೊಂಡ ನಿವೇದಿತಾ ಗೌಡ, ಇವಳೇ ನನ್ನ ಪಾಟ್ನರ್, ಇವಳು ನನಗಷ್ಟೇ ಎಂದಿದ್ದಾರೆ.
ನಿವೇದಿತಾ ಜೂನ್ 7ರಂದು ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಚಂದನ್ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು.
ಬಿಗ್ ಬಾಸ್ ರಿಯಾಲಿಟಿ ಶೋ ಮಾಜಿ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಹೊರಗೆ ಬಂದ್ಮೇಲೆ ಫುಲ್ ಫೇಮಸ್ ಆದ್ರು. ಹೊಸ ಹೊಸ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ರು. ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡಿದ್ರು. ಇದೀಗ ಮತ್ತೆ ಕಿರುತೆರೆ ರೀ ಎಂಟ್ರಿ ಕೊಡ್ತಿದ್ದಾರೆ.
ನಿವೇದಿತಾ ಗೌಡ ಕಲರ್ಸ್ ಕನ್ನಡಕ್ಕೆ ಮರಳಿ ಬಂದಿದ್ದಾರೆ. ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ವೀಕೆಂಡ್ನಲ್ಲಿ ಬರುವ ನೂತನ ಕಾರ್ಯಕ್ರಮ, ಬಾಯ್ಸ್ ವರ್ಸಸ್ ಗರ್ಲ್ಸ್ ನಲ್ಲಿ ನಿವೇದಿತಾ ಕೂಡ ಭಾಗಿಯಾಗ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






