Bengaluru traffic Police: ಟ್ರಾಫಿಕ್ ಫೈನ್ ನೆಪದಲ್ಲಿ ಫೋನ್ ಪೇ ಮೂಲಕ ಲಂಚ ಸ್ವೀಕಾರ..!

ಫೆಬ್ರವರಿ 26, 2025 - 21:05
 0  13
Bengaluru traffic Police: ಟ್ರಾಫಿಕ್ ಫೈನ್ ನೆಪದಲ್ಲಿ ಫೋನ್ ಪೇ ಮೂಲಕ ಲಂಚ ಸ್ವೀಕಾರ..!

ಬೆಂಗಳೂರು: ಸಾಮಾನ್ಯವಾಗಿ ಈಗಿನ ಟ್ರಾಫಿಕ್‌ ನಿಯಮ ಉಲ್ಲಂಘನೆಗೆ ದಂಡದ ಪ್ರಮಾಣ ಕಡಿಮೆಯೇನಿಲ್ಲ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಟ್ರಾಫಿಕ್‌ ಪೊಲೀಸರು ಒಂದಷ್ಟು ಜೇಬಿಗೆ ಇಟ್ಟರೆ ಗಾಡಿ ಬಿಟ್ಟುಕಳಿಸುವ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಈ ಮೂಲಕ ಇಲಾಖೆಗೆ ಹಾಗೂ ತಮ್ಮ ವೃತ್ತಿಗೆ ದ್ರೋಹ ಬಗೆಯುವವರೂ ಇದ್ದಾರೆ ಎಂದು ಹಲವರು ಸೋಶಿಯಲ್‌ ಮೀಡಿಯಾಗಳಲ್ಲಿ ನೋವು ತೋಡಿಕೊಳ್ಳುತ್ತಾರೆ.

ಸದ್ಯ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಸಂಚಾರ ಪೊಲೀಸರು ಫೋನ್‌ಪೇ ಮತ್ತು ಗೂಗಲ್‌ಪೇ ಮೂಲಕ ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಒಬ್ಬ ವಾಹನ ಸವಾರ, ಟ್ರಾಫಿಕ್ ನಿಯಮ ಉಲ್ಲಂಘನೆಗೆ 500 ರೂಪಾಯಿಗಳನ್ನು ಫೋನ್‌ಪೇ ಮೂಲಕ ಪೊಲೀಸರಿಗೆ ಪಾವತಿಸಲಾಗಿದೆ ಎಂದು ದೂರಿದ್ದು,

ಫೆಬ್ರವರಿ 21 ರಂದು ವಾಹನ ಸವಾರರೊಬ್ಬರು ವರ್ತೂರು ಕರೆ ಬಳಿ ಓನ್ ವೇಯಲ್ಲಿ ಬಂದಿದ್ದರು. ರಾಚಮಲ್ಲ‌ ಎಂಬಾತ ಓನ್ ವೇಯಲ್ಲಿ ಬಂದು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್​ಟೇಬಲ್ ಮಂಜುನಾಥ್ ವಾಹನವನ್ನು ಅಡ್ಡ ಹಾಕಿ ನಿಲ್ಲಿಸಿದರು. ವಾಹನ ಸವಾರ 1500 ರೂಪಾಯಿ ದಂಡ ಪಾವತಿಸಲು ಸಿದ್ಧರಾಗಿದ್ದರು. ಆದರೆ, ವಾಹನ ಸವಾರನಿಗೆ ದಂಡದ ರಸೀದಿ ನೀಡಲು ಮಂಜುನಾಥ್ ಸಿದ್ಧರಿರಲಿಲ್ಲ. ಕೊನೆಗೆ 500 ರೂಪಾಯಿ ಫೋನ್ ಪೇ ಮಾಡಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.

ವೈಟ್​ಫೀಲ್ಡ್ ಸಂಚಾರ ಪೊಲೀಸರ ಲಂಚಾವಾತರದ ಬಗ್ಗೆ ವಾಹನ ಸವಾರ ರಾಚಮಲ್ಲ ಎಸಿಪಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಕಾನ್ಸ್​ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಚಮಲ್ಲ ದೂರಿನಲ್ಲಿ ಆಗ್ರಹಿಸಿದ್ದಾರೆ. ಇ ಮೇಲ್ ಮೂಲಕ ಎಸಿಪಿ ರಮೇಶ್ ದೂರು ಸ್ವೀಕಾರ ಮಾಡಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ಸಂಚಾರಿ ಠಾಣೆ ಇನ್ಸ್​​ಪೆಕ್ಟರ್​​ಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಪ್ರದೇಶಗಳಲ್ಲಿ ಸಂಚಾರ ಪೊಲೀಸರೂ ಅದರ ಲಾಭ ಪಡೆದು ಲಂಚ ಪಡೆಯುತ್ತಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow