ಬಾಯ್‌ ಫ್ರೆಂಡ್ ಜೊತೆ ಜಗಳ: ಗುಪ್ತಾಂಗವನ್ನು ಗಾಯಗೊಳಿಸಿದ ಮಹಿಳೆ! ಆಸ್ಪತ್ರೆಗೆ ದಾಖಲು

ಆಗಸ್ಟ್ 30, 2025 - 22:10
 0  16
ಬಾಯ್‌ ಫ್ರೆಂಡ್ ಜೊತೆ ಜಗಳ: ಗುಪ್ತಾಂಗವನ್ನು ಗಾಯಗೊಳಿಸಿದ ಮಹಿಳೆ! ಆಸ್ಪತ್ರೆಗೆ ದಾಖಲು

ಉತ್ತರ ಪ್ರದೇಶ: ಹರ್ದೋಯ್ ಜಿಲ್ಲೆಯ ಮಲ್ಲವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತಂಕಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬರು ತಮ್ಮ ಬಾಯ್‌ಫ್ರೆಂಡ್ ಜೊತೆ ನಡೆದ ತೀವ್ರ ವಾಗ್ವಾದದ ನಂತರ ಅವನ ಗುಪ್ತಾಂಗಗಳನ್ನು ಗಾಯಗೊಳಿಸಿರುವ ಘಟನೆ ಸಂಭವಿಸಿದೆ. ಘಟನೆ ಮಲ್ಲವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರ ಪ್ರಕಾರ, ಅವನ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ. ದಾಳಿ ನಡೆಸಿದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆ ವ್ಯಕ್ತಿ ಮತ್ತು ಮಹಿಳೆ ಮೊದಲು ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಭೇಟಿಯಾಗಿದ್ದರು. ಅದಾದ ನಂತರ ಪ್ರೀತಿಯಾಗಿತ್ತು.

ಅವರು ಸುಮಾರು 4 ವರ್ಷಗಳಿಂದ ಸಂಬಂಧದಲ್ಲಿದ್ದರು. ಬುಧವಾರ ರಾತ್ರಿ ಆ ಮಹಿಳೆ ತನ್ನ ಪ್ರೇಮಿಯನ್ನು ತನ್ನ ಮನೆಗೆ ಆಹ್ವಾನಿಸಿದಳು. ಆದರೆ, ಮಾತುಕತೆಯ ವೇಳೆ ಸಣ್ಣ ವಿಚಾರಕ್ಕೆ ಜಗಳವಾಗಿದ್ದು, ಕೋಪದಿಂದ ಆ ಮಹಿಳೆ ಅವನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಅವನು ಗಂಭೀರವಾಗಿ ಗಾಯಗೊಂಡಿದ್ದಾನೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow