Monalisa Bhosle: ಮಲಯಾಳಂ ಸಿನಿಮಾದಲ್ಲಿ ಕುಂಭಮೇಳದ ಸುಂದರಿ..!

ಆಗಸ್ಟ್ 30, 2025 - 20:01
 0  11
Monalisa Bhosle: ಮಲಯಾಳಂ ಸಿನಿಮಾದಲ್ಲಿ ಕುಂಭಮೇಳದ ಸುಂದರಿ..!

ಮಹಾಕುಂಭ ಮೇಳದಲ್ಲಿ ವೈರಲ್‌ ಆಗಿದ್ದ ಮೊನಾಲಿಸಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮೊನಾಲಿಸಾ (Monalisa Bhosle) ತಮ್ಮ ಚೊಚ್ಚಲ ಬಾಲಿವುಡ್‌ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಇದೀಗ ಇದರ ಜೊತೆಗೆ ಪ್ರಸಿದ್ಧ ಆಭರಣ ಬ್ರ್ಯಾಂಡ್‌ನ ರಾಯಭಾರಿಯಾಗಿಯೂ ನೇಮಕಗೊಂಡಿದ್ದಾರೆ. ಹೌದು ಈಗ ಅವರು ಮಲಯಾಳಂ ಚಿತ್ರರಂಗಕ್ಕೆ ಕಾಲಿಡಲು ರೆಡಿ ಆಗಿದ್ದಾರೆ. ಅವರಿಗೆ ಸಿನಿಮಾ ಆಫರ್ ಸಿಕ್ಕಿದೆ.

ಮಧ್ಯ ಪ್ರದೇಶದ ಇಂದೋರ್​​ನವರು ಈ ಮೋನಾಲಿಸಾ. ಮಹಾಕುಂಭದಲ್ಲಿ ಅವರ ಫೋಟೋ ವೈರಲ್ ಆಯಿತು. ಅವರ ಫೋಟೋಗಳು ಗಮನ ಸೆಳೆದವು. ಆ ಬಳಿಕ ಅನೇಕ ಬ್ರ್ಯಾಂಡ್​ಗಳು ಅವರನ್ನು ಹಿಡಿದು ಪ್ರಚಾರಕ್ಕೆ ಬಳಸಿಕೊಂಡರು. ಅವರು ವಿಡಿಯೋ ಸಾಂಗ್​​ನಲ್ಲೂ ಬಳಕೆ ಆದರು. ಈಗ ಅವರಿಗೆ ಮಲಯಾಳಂ ಸಿನಿಮಾದಲ್ಲಿ ಕೆಲಸ ಮಾಡೋ ಅವಕಾಶ ಸಿಕ್ಕಿದೆ.

‘ನಾಗಮ್ಮ’ ಹೆಸರಿನ ಸಿನಿಮಾದಲ್ಲಿ ಮೋನಾಲಿಸಾ ನಟಿಸುತ್ತಿದ್ದಾರೆ. ಪಿ. ಬಿನು ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೈಲಾಶ್ ಈ ಚಿತ್ರದ ಹೀರೋ. ಈ ಸಿನಿಮಾಗೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ.

‘ನಾಗಮ್ಮ’ ಸಿನಿಮಾದ ಪೂಜಾ ಕಾರ್ಯ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಿನಿಮಾದ ಮುಹೂರ್ತಕ್ಕೆ ನಿರ್ದೇಶಕ ಸಿಬಿ ಮಲಾಯಿಲ್ ಭಾಗಿ ಆಗಿದ್ದರು. ಮೋನಾಲಿಸಾ ಅವರು ಕೋಳಿಕೋಡ್​ನಲ್ಲಿ ಜ್ಯುವೆಲರಿ ಶಾಪ್ ಉದ್ಘಾಟನೆ ಮಾಡಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕೇರಳದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂಬುದನ್ನು ಇದು ಸಾಬೀತು ಮಾಡಿತ್ತು.

ಮೋನಾಲಿಸಾ ಅವರಿಗೆ ಈಗಿನ್ನು 16 ವರ್ಷ. ಅವರು ಮಹಾಕುಂಭದಲ್ಲಿ ಹೂಮಾಲೆ ಮಾರುತ್ತಿದ್ದರು. ಅವರ ಕಣ್ಣುಗಳು ಗಮನ ಸೆಳೆಯುವ ರೀತಿಯಲ್ಲಿ ಇದ್ದವು. ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋ ಸಾಕಷ್ಟು ವೈರಲ್ ಆಯಿತು. ಈಗ ಇವರು ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಮಾಡುತ್ತಿದ್ದಾರೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow