Police Firing: ಬೆಂಗಳೂರಲ್ಲಿ ಗುಂಡಿನ ಸದ್ದು! ಕೊಲೆ ಆರೋಪಿಗಳ ಮೇಲೆ ಖಾಕಿ ಫೈರಿಂಗ್ – ಇಬ್ಬರು ಅರೆಸ್ಟ್

ಜೂನ್ 15, 2025 - 16:07
 0  10
Police Firing: ಬೆಂಗಳೂರಲ್ಲಿ ಗುಂಡಿನ ಸದ್ದು! ಕೊಲೆ ಆರೋಪಿಗಳ ಮೇಲೆ ಖಾಕಿ ಫೈರಿಂಗ್ – ಇಬ್ಬರು ಅರೆಸ್ಟ್

ಬೆಂಗಳೂರಿನಲ್ಲಿ ಪೊಲೀಸರ ಗುಂಡು ಸದ್ದು ಮಾಡಿದೆ. ಜೆಜೆ ನಗರ ಪೊಲೀಸ್ರಿಂದ ಕೊಲೆ ಆರೋಪಿಗನ್ನು ಗುಂಡು ಹೊಡೆದು ಬಂಧಿಸಲಾಗಿದೆ. ದೀಪು (28), ಅರುಣ್ (27) ಎಂಬ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದ್ದು, ವಿಜಯ್ ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳು.. ವೇಳೆ ಆರೋಪಿಗಳು ಎಎಸ್​​ ಕುಮಾರ್, ಕಾನ್ಸ್ಟೇಬಲ್ಕರೀಂಸಾಬ್ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಜೆಜೆ ನಗರ ಪೊಲೀಸ್ಠಾಣೆ ಪಿಐಕೆಂಪೇಗೌಡ, ಪಿಎಸ್ ಪದ್ಮನಾಭ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ.

ಆರೋಪಿಗಳು ಯುವಕ ವಿಜಯ್ (26) ಎಂಬುವರನ್ನು ಮಾತುಕತೆಗೆ ಅಂತ ಜೆ.ಜೆ.ನಗರದ ಜನತಾ ಕಾಲೋನಿಗೆ ಕರೆಸಿ ಕೊಲೆ ಮಾಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜೆ.ಜೆ.ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು, ವಿಜಯ್ಶನಿವಾರ (ಜೂ.14) ಜೈಲಿನಿಂದ ಹೊರಬಂದಿದ್ದನು.

ಶನಿವಾರ ರಾತ್ರಿ ವಿಜಯ್ನನ್ನು ಮಾತುಕತೆಗೆ ಅಂತ ಕರೆಸಿ ಆರೋಪಿಗಳು ಏರಿಯಾದಲ್ಲಿ ಅಟ್ಟಾಡಿಸಿ ಹತ್ಯೆಗೈದಿದ್ದರು. ಕೇಸ್ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿಗಳು ಆರ್.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿ ಅವಿತು ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ತೆರಳಿದ್ದರು. ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದರು.

ಆಗ, ಇನ್ಸ್ಪೆಕ್ಟರ್ ಕೆಂಪೇಗೌಡ ಗಾಳಿಯಲ್ಲಿ ಗುಂಡು ಹಾರಿಸಿ ವಾರ್ನ್ ಮಾಡಿದ್ದರು. ಆದರೂ ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದರು. ವೇಳೆ ಇಬ್ಬರ ಕಾಲಿಗೂ ಪೊಲೀಸರು ಗುಂಡು ಹೊಡೆದು ಬಂಧಿಸಿದರು. ಗಾಯಾಳು ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow