ಮೈಸೂರು ರಾಜವಂಶಕ್ಕೆ ಮತ್ತೊಂದು ಸಿಹಿ ಸುದ್ದಿ: ಗಂಡು ಮಗುವಿಗೆ ಜನ್ಮ ನೀಡಿದ ರಾಣಿ ತ್ರಿಷಿಕಾ ಕುಮಾರಿ

ಅಕ್ಟೋಬರ್ 11, 2024 - 12:05
 0  59
ಮೈಸೂರು ರಾಜವಂಶಕ್ಕೆ ಮತ್ತೊಂದು ಸಿಹಿ ಸುದ್ದಿ: ಗಂಡು ಮಗುವಿಗೆ ಜನ್ಮ ನೀಡಿದ ರಾಣಿ ತ್ರಿಷಿಕಾ ಕುಮಾರಿ

 ನಾಡಹಬ್ಬದ ಮೆರಗು ಜಂಬೂಸವಾರಿಗೂ ಇವತ್ತೊಂದೇ ದಿನ ಬಾಕಿ. ನಾಳೆ ಅಂಬಾರಿಯಲ್ಲಿ ವಿರಾಜಮಾನಳಾಗುವ ನಾಡ ಅಧಿದೇವತೆ ಚಾಮುಂಡಿ, ಭಕ್ತರಿಗೆ ದರ್ಶನ ಭಾಗ್ಯ ತೋರಲಿದ್ದಾಳೆ. ನವರಾತ್ರಿಯ 9ನೇ ದಿನ ಇಂದು ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಆರಂಭವಾಗಿದೆ. ಚಾಮುಂಡಿ ಬೆಟ್ಟದಲ್ಲಿ ನಸುಕಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಇದರ ಜೊತೆಗೆ ಮೈಸೂರು ರಾಜಮನೆತನಕ್ಕೆ ಇನ್ನೊಂದು ಸಿಹಿ ಸುದ್ದಿ ಬಂದಿದೆ.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಅವರು 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ. ವಿಜಯದಶಮಿ ಸಡಗರದಲ್ಲಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಶುಭಸುದ್ದಿ ಸಿಕ್ಕಿದೆ.

ಅಲ್ಲದೇ ದಸರಾ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಅರಮನೆಯಲ್ಲಿ ಸಂಭ್ರಮ ಹೆಚ್ಚಿದೆ. ಬೆನ್ನಲ್ಲೇ ಇದೀಗ 2ನೇ ಮಗು ಜನನ ಆಗಿರುವುದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಡಬಲ್ ಖುಷಿ ಸಿಕ್ಕಂತೆ ಆಗಿದೆ. ನವರಾತ್ರಿ ಸಂಭ್ರಮದಲ್ಲಿ ರಾಜರ ಕುಟುಂಬದಲ್ಲಿ ಸಂತಸ ಮತ್ತಷ್ಟು ಹೆಚ್ಚಾದಂತೆ ಆಗಿದೆ. 

 

 ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow