ನಿಮ್ಮ ಮೊಬೈಲ್ ಗೆ ಹ್ಯಾಪಿ ನ್ಯೂ ಇಯರ್ ಅಂತ ಮೆಸೇಜ್ ಬಂತಾ!? ಹಾಗಿದ್ರೆ ಹುಷಾರ್, ಇದು ವಂಚನೆ ಜಾಲಾ!

ಜನವರಿ 1, 2025 - 21:02
 0  11
ನಿಮ್ಮ ಮೊಬೈಲ್ ಗೆ ಹ್ಯಾಪಿ ನ್ಯೂ ಇಯರ್ ಅಂತ ಮೆಸೇಜ್ ಬಂತಾ!? ಹಾಗಿದ್ರೆ ಹುಷಾರ್, ಇದು ವಂಚನೆ ಜಾಲಾ!

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಜಾಲ ಹೆಚ್ಚಾಗಿದೆ. ಹೀಗಾಗಿ ವಾಟ್ಸಾಪ್ ನಲ್ಲಿ ಬರುವ ಕೆಲವೊಂದು ಮೆಸೇಜ್ ಗಳ ಬಗ್ಗೆ ಜಾಗೃತಿ ವಹಿಸೋದು ಮುಖ್ಯ ಆಗತ್ತೆ. 

ಯಾವುದೋ ಅಪರಿಚಿತ, ಪರಿಚಿತರ ಸೋಗಿನಲ್ಲಿ ನಿಮಗೆ ಬರುವ ಮೆಸೇಜ್​​ಗಳ ಮೇಲೆ ಕ್ಲಿಕ್ ಮಾಡುವಾಗ ಒಮ್ಮೆ ಯೋಚಿಸಿ. ಯಾಕೆಂದರೆ ಒಂದು ಸಣ್ಣ ಕ್ಲಿಕ್​ನಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವೇ ಖಾಲಿ ಆಗಬಹುದು. ಹೀಗಾಗಿ ಜಾಗೃತಿ ವಹಿಸೋದು ಸೂಕ್ತ.

ಕೆಲವರು ಹೊಸ ವರ್ಷದ ಶುಭಾಶಯ ಎಂದು ವಿಡಿಯೋ ಇತ್ಯಾದಿಗಳನ್ನು ಶೇರ್ ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸೈಬರ್ ದಾಳಿಕೋರರು ಸಂದೇಶದ ಜೊತೆಗೆ ಮಾಲ್‌ವೇರ್ ಹೊಂದಿರುವ ಫೈಲ್ ಲಗತ್ತಿಸಿ ನಿಮ್ಮನ್ನು ಯಾಮಾರಿಸಬಹುದು. ಹಾಗಾಗಿ ಎಚ್ಚರದಿಂದಿರಿ.

ಇರಲಿ ಎಚ್ಚರಿಕೆ..!

ಅನುಮಾನಾಸ್ಪದ ಸಂಖ್ಯೆಯಿಂದ ಬರುವ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
ಯಾವುದಾದರು ಉಡುಗೊರೆ, ಉಚಿತ ಸೇವೆಯ ಆಮಿಷದ ಲಿಂಕ್ ಬಂದ್ರೆ ಹುಷಾರ್
ಅಪರಿಚಿತರು ಕರೆ ಮಾಡಿ ಲಾಟರಿ ಅಥವಾ ಗಿಫ್ಟ್ ಗೆಲ್ಲುವಂತೆ ಪ್ರಚೋದಿಸಿದರೆ ಎಚ್ಚರದಿಂದಿರಿ
ಕ್ಯೂಆರ್ ಕೋಡ್ ಮೂಲಕವೂ ವಂಚನೆ ನಡೆಯುತ್ತಿದೆ ಜಾಗೃತರಾಗಿ
ಅಪರಿಚಿತ ವ್ಯಕ್ತಿಗಳೊಂದಿಗೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ

ಜನ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಆತ್ಮೀಯರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಪರಸ್ಪರ ಶುಭ ಹಾರೈಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮೆಸೇಜ್​​ಗಳನ್ನು ಕಳುಹಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಿದ್ದಾರೆ. ಈ ನಡುವೆ ಕೆಲವು ವಂಚಕರು ನಿಮ್ಮ ಮೇಲೆ ಕಣ್ಣಿಟ್ಟಿರಬಹುದು. ಹೀಗಾಗಿ ನೀವು ಜಾಗೃತಿ ವಹಿಸೋದು ಸೂಕ್ತವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow