ಬಿಗ್ ಬಾಸ್ ಮನೆಗೆ ಸರ್ಪ್ರೈಸ್ ಹೊತ್ತು ತಂದ ಮಾಜಿ ಸ್ಪರ್ಧಿ..! ಕಿಚ್ಚ ಸುದೀಪ್ʼಗೆ ಧನ್ಯವಾದ ಹೇಳಿದ ರಜತ್

ಬಿಗ್ ಬಾಸ್ ಕನ್ನಡ 11ರ ವಿನ್ನರ್ ಯಾರು ಎಂಬ ಕೌತುಕಕ್ಕೆ ಇಡೀ ಕರುನಾಡು ಕಾಯುತ್ತಿದೆ. ಸದ್ಯ ಟಾಪ್ ಆರರಲ್ಲಿ ಘಟಾನುಘಟಿ ಸ್ಪರ್ಧಿಗಳೇ ನಿಂತಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ಭವ್ಯಾ ಗೌಡ, ಮೋಕ್ಷಿತಾ ಪೈ, ರಜತ್ ಪೈಕಿ ಯಾರು ಕಪ್ ಎತ್ತಿ ಹಿಡಿಯುವವರು ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳ ಫ್ಯಾನ್ಸ್, ವೋಟ್ಗಾಗಿ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ.
ಇದರ ನಡುವೆ ಮೊನ್ನೆಯಷ್ಟೇ ಬಿಗ್ಬಾಸ್ ಮುಂದೆ ನನಗೆ ಕಿಚ್ಚ ಸದೀಪ್ ಅವರು ಧರಿಸಿದ್ದ ಜಾಕೆಟ್ ಬೇಕು ಅಂತ ಹೇಳಿದ್ದರು. ಇದೀಗ ಇದೇ ಆಸೆಯನ್ನು ಬಿಗ್ಬಾಸ್ ಪೂರೈಸಿದ್ದಾರೆ. ಬಿಗ್ಬಾಸ್ ಮನೆಗೆ ಮಾಜಿ ಸ್ಪರ್ಧಿ ರಾಜೀವ್ ಅವರು ಸೈಲೆಂಟ್ ಆಗಿ ಎಂಟ್ರಿ ಕೊಟ್ಟು ಸರ್ಪ್ರೈಸ್ ಕೊಟ್ಟಿದ್ದಾರೆ. ಆಗ ನಾನು ರಜತ್ ಅವರ ಆಸೆಯನ್ನು ಹೊತ್ತು ತಂದಿದ್ದೇನೆ ಎಂದಿದ್ದಾರೆ.
ಆ ಕೂಡಲೇ ನಟ ರಾಜೀವ್, ರಜತ್ ನೀವು ಸುದೀಪ್ ಅಣ್ಣ ಧರಿಸಿದ್ದ ಜಾಕೆಟ್ ಬೇಕು ಅಂತ ಹೇಳಿದ್ದೀರಿ. ಆದ್ರೆ ಅಣ್ಣ ಯಾವಾಗಲೂ ಒಂದು ಪಟ್ಟ ಮೇಲೆ ಯೋಚನೆ ಮಾಡುತ್ತಾರೆ. ಹೀಗಾಗಿ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಧರಿಸಿದ್ದ ಜಾಕೆಟ್ ಅನ್ನು ನಿನಗಾಗಿ ಕಳುಹಿಸಿ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರ ಜಾಕೆಟ್ ನೋಡುತ್ತಿದ್ದಂತೆ ಸ್ಪರ್ಧಿಗಳು ಫುಲ್ ಶಾಕ್ ಆಗಿದ್ದಾರೆ. ಆಗ ರಜತ್ ಕಿಚ್ಚ ಸುದೀಪ್ ಅವರು ಕಳುಹಿಸಿ ಜಾಕೆಟ್ ಅನ್ನು ಧರಿಸಿಕೊಂಡು ಧನ್ಯವಾದ ತಿಳಿಸಿದ್ದಾರೆ. ಸುದೀಪ್ ಸರ್ ಥ್ಯಾಂಕ್ಯೂ ಸೋ ಮಚ್. ನೀವು ಎಲ್ಲರಿಗೂ ಇನ್ಸ್ಪಿರೇಷನ್ ಆಗಿದ್ದೀರಿ. ನಿಮ್ಮ ಬಗ್ಗೆ ಎಷ್ಟು ಹೇಳಿದ್ದರು ಸಾಕಾಗೋದಿಲ್ಲ. ಬೇಗ ಬನ್ನಿ ಸರ್ ಶನಿವಾರ ಇದೇ ಜಾಕೆಟ್ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ.
ಇನ್ನೂ, ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ರಜತ್ ಕಿಶನ್ಗೆ ಎರಡು ಬಾರಿ ಗಿಫ್ಟ್ಗಳನ್ನು ಕೊಟ್ಟಿದ್ದಾರೆ. ಒಂದು ವಾರದ ಸಂಚಿಕೆಯಲ್ಲಿ ತಾವು ಕಿವಿಯಲ್ಲಿ ಹಾಕಿಕೊಂಡಿದ್ದ ಓಲೆಯನ್ನೇ ಗಿಫ್ಟ್ ಆಗಿ ಕೊಟ್ಟಿದ್ದರು. ಇದೀಗ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಧರಿಸಿದ್ದ ಗ್ರ್ಯಾಂಡ್ ಜಾಕೆಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






