Virat Kohli: 2024ರಲ್ಲಿ ಕಿಂಗ್ ಕೊಹ್ಲಿ ಕಂಡ ಏಳುಬೀಳು! ಸಿಹಿ-ಕಹಿ ಅನುಭವ ಹೇಗಿತ್ತು?

ಕಿಂಗ್ ಕೊಹ್ಲಿ. ಕ್ರಿಕೆಟ್ ಜಗತ್ತಿನ ರಾಜ ಎಂದು ಅಭಿಮಾನಿಗಳು ಕರೆಯುತ್ತಾರೆ. ಅವರ ಬ್ಯಾಟಿಂಗ್, ಅಗ್ರೇಷನ್, ಎನರ್ಜಿ ಅಬ್ಬಾ ಒಬ್ಬ ಆಟಗಾರ ಹೇಗೆಲ್ಲಾ ಅಭಿಮಾನಿಗಳಿಗೆ ರಂಜಿಸಬೇಕೋ ಅದನ್ನು ವಿರಾಟ್ ಮಾಡ್ತಾರೆ.
ಕ್ರಿಕೆಟ್ ನಲ್ಲಿ ಸಕ್ಸಸ್ ಕಂಡಿರುವ ವಿರಾಟ್ ಗೆ 2024 ವರ್ಷ ಏಳು ಬೀಳಿನದಾಗಿತ್ತು. ಎಸ್, 2024 ರಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಕಿಂಗ್ ಕೊಹ್ಲಿ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದಾರೆ. ಆದರೆ ಇದೇ ವರ್ಷ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನೂ ಸಹ ನೀಡಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು...
ವಿರಾಟ್ ಕೊಹ್ಲಿ ಈ ವರ್ಷ ಒಟ್ಟು 23 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 32 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಕೊಹ್ಲಿಯ ಬ್ಯಾಟ್ನಿಂದ ಮೂಡಿಬಂದ ಶತಕಗಳ ಸಂಖ್ಯೆ ಕೇವಲ 1. ಇನ್ನು ಐವತ್ತರ ಗಡಿದಾಟಿದ್ದು ಕೇವಲ 2 ಬಾರಿ ಮಾತ್ರ ಎಂದರೆ ನಂಬಲೇಬೇಕು.
ಈ ವರ್ಷ 10 ಟೆಸ್ಟ್ ಪಂದ್ಯಗಳಲ್ಲಿ 19 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 673 ಎಸೆತಗಳಲ್ಲಿ 417 ರನ್ ಕಲೆಹಾಕಿದ್ದಾರೆ. ಅದು ಕೂಡ ಕೇವಲ 24.52 ರ ಸರಾಸರಿಯಲ್ಲಿ. ಈ ವೇಳೆ ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಬಾರಿಸಲಷ್ಟೇ ಶಕ್ತರಾಗಿದ್ದಾರೆ.
2024ರಲ್ಲಿ ವಿರಾಟ್ ಕೊಹ್ಲಿ ಕೇವಲ 3 ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 58 ರನ್ಗಳು. ಅಂದರೆ 19.33 ರ ಅವರೇಜ್ನಲ್ಲಿ ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಈ ಮೂರು ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ಸಹ ಬಾರಿಸಿಲ್ಲ.
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಈ ವರ್ಷ 10 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 9 ಪಂದ್ಯಗಳಲ್ಲೂ ಅಟ್ಟರ್ ಫ್ಲಾಪ್ ಆಗಿದ್ದರು. ಆದರೆ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ 76 ರನ್ ಬಾರಿಸಿ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಾಗ್ಯೂ ಈ ವರ್ಷ ಕೊಹ್ಲಿ 10 ಟಿ20 ಪಂದ್ಯಗಳಿಂದ 18ರ ಸರಾಸರಿಯಲ್ಲಿ 180 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ
ಅಂದರೆ ಮೂರು ಮಾದರಿಯಲ್ಲೂ ವಿರಾಟ್ ಕೊಹ್ಲಿ ಕಡೆಯಿಂದ ಈ ವರ್ಷ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಈ ಕಳಪೆ ಪ್ರದರ್ಶನೊಂದಿಗೆ 2024 ಕ್ಕೆ ಗುಡ್ ಬೈ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






