Israel-Iran War: ಇಸ್ರೇಲ್’ನಲ್ಲಿ ಸಿಲುಕಿದ್ದಾರೆ 18ಕ್ಕೂ ಹೆಚ್ಚು ಮಂದಿ ಕನ್ನಡಿಗರು..!

ಜೂನ್ 15, 2025 - 14:18
ಜೂನ್ 15, 2025 - 14:19
 0  7
Israel-Iran War:  ಇಸ್ರೇಲ್’ನಲ್ಲಿ ಸಿಲುಕಿದ್ದಾರೆ 18ಕ್ಕೂ ಹೆಚ್ಚು ಮಂದಿ ಕನ್ನಡಿಗರು..!

ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧದಿಂದ ಪಶ್ಚಿಮ ಏಷ್ಯಾ ತತ್ತರಿಸುತ್ತಿದೆ. ಇಸ್ರೇಲ್ ಇರಾನ್ ಪರಮಾಣು ಸೌಲಭ್ಯಗಳು ಮತ್ತು ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖೊಮೇನಿ ಅವರ ಮನೆಯನ್ನು ಗುರಿಯಾಗಿಸಿಕೊಂಡು ಕುಂಭಮೇಳಕ್ಕೆ ಬೆದರಿಕೆ ಹಾಕಿದೆ. ಇರಾನಿನ ನಾಯಕನ ನಿವಾಸದ ಬಳಿಯೂ ವಾಯುದಾಳಿಗಳು ನಡೆದಿವೆ ಎಂದು ಹೇಳಲಾಗುತ್ತದೆ. ಟೆಹ್ರಾನ್ ಮೊನಿರಿಯಾದಲ್ಲಿರುವ ಖೊಮೇನಿ ಅವರ ನಿವಾಸವು ಇರಾನ್ ಅಧ್ಯಕ್ಷೀಯ ಕಚೇರಿಯ ನೆಲೆಯಾಗಿದೆ. ಅದಲ್ಲದೆ ಅಧ್ಯನ ಪ್ರವಾಸಕ್ಕೆಂದು ತೆರಳಿದ್ದ 18 ಮಂದಿ ಕನ್ನಡಿಗರು ಇಸ್ರೇಲ್ನಲ್ಲಿ ಸಿಲುಕಿದ್ದಾರೆ.

ಒಂದು ವಾರದಿಂದ ಇಸ್ರೇಲ್ನಲ್ಲಿದ್ದ ಕನ್ನಡಿಗರ ತಂಡ, ಶುಕ್ರವಾರ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ ಇಸ್ರೇಲ್ -ಇರಾನ್ ಸಂಘರ್ಷದ ಪರಿಣಾಮ ದಿಢೀರ್ ವಿಮಾನ ಹಾರಾಟ ಸ್ಥಗಿತಗೊಳಿಸಿದ ಹಿನ್ನೆಲೆ ಬಿ ಪ್ಯಾಕ್ ಎನ್ಜಿಒ ತಂಡ ಇಸ್ರೇಲ್ ರಾಜಧಾನಿ ಟೆಲ್ ಅವೀವ್ನಲ್ಲಿ ಉಳಿದುಕೊಂಡಿದೆ.

ಇಸ್ರೇಲ್ ಹಾಗೂ ಇರಾನ್ ನಡುವೆ ದಾಳಿ- ಪ್ರತಿದಾಳಿ ತೀವ್ರಗೊಂಡ ಬೆನ್ನಲ್ಲೇ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಹಿನ್ನೆಲೆ 61 ಮಂದಿ ಭಾರತೀಯರು ಜಾರ್ಜಿಯಾದಲ್ಲಿ ಸಿಲುಕಿದ್ದಾರೆ. ರಾಜಸ್ಥಾನದ 61 ಮಂದಿಯ ತಂಡ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮಕ್ಕೆ ಜೂನ್ 8ರಂದು ತೆರಳಿದ್ದರು.

ಜೂನ್ 13ರಂದು ಶಾರ್ಜಾ ಮೂಲಕ ಭಾರತಕ್ಕೆ ವಾಪಸ್ ಆಗಬೇಕಿತ್ತು. ವಿಮಾನ ಸ್ಥಗಿತಗೊಂಡ ಹಿನ್ನೆಲೆ ಅಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿನ್ನೆಲೆ ತುರ್ತಾಗಿ ತಮಗೆ ಸಹಾಯ ಮಾಡುವಂತೆ ಕೋರಿ ಭಾರತ ಸರ್ಕಾರಕ್ಕೆ ಭಾರತೀಯ ತಂಡ ಮನವಿ ಮಾಡಿದೆ. ಭಾರತಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳುವಂತೆ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಮನವಿ ಮಾಡಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow